ಉಡುಪಿ, ನ.16: ಅಮೂರ್ತದಿಂದ ಮೂರ್ತದಡೆಗೆ ನಮ್ಮನ್ನು ಕೊಂಡೊಯ್ಯುವುದೇ ಕವನ. ಕವಿಗಳು ತಮ್ಮ ಸ್ವರಚಿತ ಕವನ ವಾಚಿಸುವಾಗ ಶೋತ್ರಗಳು ತಾವೇ ಅನುಭವಿಸಿದಂತೆ ಭಾವನೆ ಬಂದಾಗ ಕವನದ ವಾಚನ ಸಾರ್ಥಕತೆಯನ್ನು ಕಾಣುತ್ತದೆ ಎಂದು ಸಾಹಿತಿ ಡಾ.ಮಾಧವಿ ಹೇಳಿದರು. ಅವರು ಶುಕ್ರವಾರ ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಉಡುಪಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭ – 2024 ಇದರ ಅಂಗವಾಗಿ ನಡೆದ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ನಳಿನಿ ಜಿ. ಐ., ಗ್ರಂಥಾಲಯ ಸಪ್ತಾಹ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಕವಿ ಗೋಷ್ಠಿಯಲ್ಲಿ ನಾರಾಯಣ ಮಡಿ, ಪೂರ್ಣಿಮಾ ಜನಾರ್ದನ್ ಕೊಡವೂರು, ವಾಸಂತಿ ಅಂಬಲಪಾಡಿ, ರಂಜಿನಿ ವಸಂತ್, ಉಮೇಶ್ ಆಚಾರ್ಯ, ಅಂಬಿಕಾ ಉಡುಪಿ, ಸಂಜೀವ ನಾಯಕ್, ರಾಜೇಶ್ ಭಟ್ ಪಣಿಯಾಡಿ, ರಮ್ಯಾ ರಾಕೇಶ್ ಮಲ್ಪೆ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್. ಪಿ. ಪ್ರಸ್ತಾಪಿಸಿದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ನಿರೂಪಿಸಿ, ಸತೀಶ್ ಕೊಡವೂರು ವಂದಿಸಿದರು.
ಅಮೂರ್ತದಿಂದ ಮೂರ್ತದಡೆಗೆ ನಮ್ಮನ್ನು ಕೊಂಡೊಯ್ಯುವುದೇ ಕವನ: ಡಾ. ಮಾಧವಿ ಭಂಡಾರಿ

ಅಮೂರ್ತದಿಂದ ಮೂರ್ತದಡೆಗೆ ನಮ್ಮನ್ನು ಕೊಂಡೊಯ್ಯುವುದೇ ಕವನ: ಡಾ. ಮಾಧವಿ ಭಂಡಾರಿ
Date: