ಉಡುಪಿ, ನ.10: ವೈಶ್ಯವಾಣಿ ಸಮಾಜದ ಉಡುಪಿ ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ರವಿವಾರ ಮುಂಜಾನೆ 5 ಸಾವಿರ ಹಣತೆಗಳ ದೀಪ ಬೆಳಗಿಸಿ ವಿಶ್ವರೂಪ ದರ್ಶನ ನಡೆಯಿತು. 15 ಅಡಿ ಉದ್ದ ವರಾಹ ಅವತಾರ ಮಾದರಿಯ ರಂಗೋಲಿ ಗಮನ ಸೆಳೆಯಿತು. ದೇವರಿಗೆ ವಿಶೇಷ ಹೂವಿನ ಅಲಂಕಾರ, ದೀಪರಾಧನೆ, ಭಜನಾ ಕಾರ್ಯಕ್ರಮ ನಡೆಯಿತು. ಮಹಾಪೂಜೆ ಅನಂತರ ಪ್ರಸಾದ ವಿತರಣೆ ನಡೆಯಿತು. ರಾಘವೇಂದ್ರ ಭಟ್, ಶ್ರೀನಿವಾಸ ತಂತ್ರಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು.
ಅಂಬಾಗಿಲು: ಗಮನ ಸೆಳೆದ ವರಾಹ ಅವತಾರ ರಂಗೋಲಿ

ಅಂಬಾಗಿಲು: ಗಮನ ಸೆಳೆದ ವರಾಹ ಅವತಾರ ರಂಗೋಲಿ
Date: