Wednesday, November 13, 2024
Wednesday, November 13, 2024

ಹೆದ್ದಾರಿ ಸಮರ್ಪಕಗೊಳಿಸದಿದ್ದಲ್ಲಿ ಟೋಲ್ ಗೇಟ್ ಗೆ ಮುಕ್ತಿಗಾಣಿಸಲಿದ್ದೇವೆ: ಹೆದ್ದಾರಿ ಜಾಗೃತಿ ಸಮಿತಿಯಿಂದ ಎಚ್ಚರಿಕೆ

ಹೆದ್ದಾರಿ ಸಮರ್ಪಕಗೊಳಿಸದಿದ್ದಲ್ಲಿ ಟೋಲ್ ಗೇಟ್ ಗೆ ಮುಕ್ತಿಗಾಣಿಸಲಿದ್ದೇವೆ: ಹೆದ್ದಾರಿ ಜಾಗೃತಿ ಸಮಿತಿಯಿಂದ ಎಚ್ಚರಿಕೆ

Date:

ಕೋಟ, ನ.9: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ, ಉರಿಯದ ದೀಪ, ಹೊಂಡ ಗುಂಡಿಗಳಿಂದ ವಾಹನ ಸವಾರರಿಗೆ ಪಾದಚಾರಿ ಸಮಸ್ಯೆ, ಸ್ಥಳೀಯ ಸಂಘಸಂಸ್ಥೆ ಸೇರಿದಂತೆ ಇತರ ವಾಹನಗಳಿಗೆ ವಿಧಿಸುತ್ತಿರುವ ಸುಂಕ. ಇವೆಲ್ಲವನ್ನೂ ಖಂಡಿಸಿ ಶನಿವಾರ ಸಾಸ್ತಾನ ಟೋಲ್‌ಗೆ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾ.ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ, ಸಂಸ್ಥೆಗಳ ಹೆಸರಿನಲ್ಲಿ ನೋಂದಾವಣಿ ಆಗಿರುವ ವಾಹನಗಳಿಗೆ ಟೋಲ್‌ ಸುಂಕ ವಸೂಲಾತಿ ನಡೆಯುತ್ತಿದೆ. ಹಲವು ಬಾರಿ ಸ್ಥಳೀಯ ಶಾಲಾ ವಾಹನಗಳು ಟೋಲ್‌ನಲ್ಲಿ ಸಮಯ ವ್ಯರ್ಥಗೊಳಿಸುತ್ತಿರುವುದರಿಂದ ಶಾಲಾ ಮಕ್ಕಳಿಗೆ ಮಾನಸಿಕವಾಗಿ ಸಾಕಷ್ಟು ಹಿಂಸೆಯಾಗುತ್ತದೆ. ಹೀಗೆ ಮುಂದುವರಿದರೆ ಕಮರ್ಶಿಯಲ್‌ ವಾಹನಗಳಿಗೂ ಟೋಲ್‌ ವಿಧಿಸುತ್ತಾರೆ. ಇದು ಅವರ ತಂತ್ರವಾಗಿದ್ದು, ಹಂತ ಹಂತವಾಗಿ ಟೋಲ್‌ ಸಂಗ್ರಹಣೆ ಆರಂಭಿಸುವುದು ಅವರ ಗುರಿಯಾಗಿದೆ. ಇಷ್ಟಲ್ಲದೆ ಸಾಸ್ತಾನದಿಂದ ಕುಂದಾಪುರಕ್ಕೆ ತೆರಳುವ ಮಾರ್ಗವೆನ್ನವುದು ಹೊಂಡಮಯವಾಗಿದೆ. ಪಾದಾಚಾರಿ ಮಾರ್ಗಗಳಲ್ಲಿ ಬೃಹತ್ ಹೊಂಡಗಳಿಂದ ಸಾವು ನೋವು ಸಂಭವಿಸುತ್ತಿದೆ. ಬೀದಿ ದೀಪಗಳು ಸಮರ್ಪಕವಾಗಿ ಉರಿಯುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಇಟ್ಟುಕೊಂಡು ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ. ಇದು ಕಂಪೆನಿ ಸರ್ಕಾರವಲ್ಲ. ಪ್ರಜಾಪ್ರಭುತ್ವ ಎನ್ನುವುದು ನೆನಪಿರಲಿ ಎಂದು ಆಕ್ರೋಶ ಹೊರಹಾಕಿದ ಸಮಿತಿಯ ಅಧ್ಯಕ್ಷರು ನಮ್ಮ ಬೇಡಿಕೆಯಾಗಿ ಸ್ಥಳೀಯ ಜಿ.ಪಂ ಎಲ್ಲಾ ವಾಹನಗಳಿಗೆ ಈ ಹಿಂದೆ ವಿನಾಯ್ತಿ ನೀಡಲಾಗಿದೆ ಅದರಂತೆ ನಡೆದುಕೊಳ್ಳಲಿ. ರಸ್ತೆ ದುರಸ್ಥಿ ಸಮರ್ಪಕವಾಗಿ ಕಾಲಕಾಲಕ್ಕೆ ಅನುಗುಣವಾಗಿ ಮಾಡಬೇಕು. ದಾರಿದೀಪ ರಿಪೇರಿಯಾಗಬೇಕು,ಸಮರ್ಪಕ ಸರ್ವಿಸ್ ರಸ್ತೆ ನಿರ್ಮಾಣ ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆ ಆಗದಂತೆ ಕ್ರಮ,, ರಸ್ತೆ ಬದಿ ಮಣ್ಣು ಹಾಕಿಸಿ, ಜನಸಾಮಾನ್ಯರಿಗೆ ಸಂಚರಿಸಲು ಯೋಗ್ಯಗೊಳಿಸುವುದು, ಟೋಲ್ ಪ್ಲಾಜಾ ಬಳಿ ಭಾರಿ ಗಾತ್ರದ ವಾಹನ ನಿಲ್ಲದಂತೆ ಕ್ರಮ ವಹಿಸುವುದು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಕಳೆದ ಹತ್ತು ವರ್ಷಗಳಿಂದ ಪ್ರತಿ ಬಾರಿ ಟೋಲ್ ಇನ್ನಿತರ ಸಮಸ್ಯೆಗಳನ್ನು ಸೃಷ್ಠಿಸಿ ಹೆದ್ದಾರಿ ಸಮಿತಿ ಹಾಗೂ ಜನಸಾಮಾನ್ಯರಿಗೆ ತೊಂದರೆಕೊಡುತ್ತಿದ್ದಿರಿ. ಇದೇ ರೀತಿ ಮುಂದುವರೆದರೆ ಟೋಲ್ ಗೇಟ್ ಗೆ ಮುಕ್ತಿಗಾಣಿಸಲಿದ್ದೇವೆ ಎಂದು ಜಾಗೃತಿ ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಎಚ್ಚರಿಕೆ ನೀಡಿದರು‌. ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರು, ವಾಹನ ಚಾಲಕರು ಮುಂತಾದವರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗ್ರಾಮ ಪಂಚಾಯತ್ ಕಾರ್ಯಪಡೆ ಸದಸ್ಯರಿಗೆ ಗ್ರಾಮ ಆರೋಗ್ಯ ತರಬೇತಿ ಕಾರ್ಯಗಾರ

ಉಡುಪಿ, ನ.13: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಗ್ರಾಮ ಪಂಚಾಯತ್ ಉಪಚುನಾವಣೆ: ಸಂತೆ, ಜಾತ್ರೆ ನಿಷೇಧ

ಉಡುಪಿ, ನ.13: ಜಿಲ್ಲೆಯ ಉಡುಪಿ ತಾಲೂಕಿನ ಬೊಮ್ಮಾರಬೆಟ್ಟು ಹಾಗೂ 13-ಕೊಡಿಬೆಟ್ಟು, ಕುಂದಾಪುರ...

ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಪ್ರಾರಂಭಿಸಲು ಅರ್ಜಿ ಆಹ್ವಾನ

ಉಡುಪಿ, ನ.13: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ...

ಕಾರ್ಮಿಕರಿಗೆ ಲಭ್ಯವಿರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ನ.12: ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು...
error: Content is protected !!