Saturday, January 18, 2025
Saturday, January 18, 2025

ಕೊಡವೂರು: ಆರೋಗ್ಯ ತಪಾಸಣಾ ಶಿಬಿರ

ಕೊಡವೂರು: ಆರೋಗ್ಯ ತಪಾಸಣಾ ಶಿಬಿರ

Date:

ಕೊಡವೂರು, ನ.8: ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು, ಲಯನ್ಸ್ & ಲಿಯೋ ಕ್ಲಬ್, ಪರ್ಕಳ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಲ್ಪೆ, ಸಮುದಾಯ ವೈದ್ಯಕೀಯ ವಿಭಾಗ, ನರರೋಗ ವಿಭಾಗ, ಅಕ್ಯುಪೇಶನಲ್ ಥೆರಪಿ ವಿಭಾಗ, ಕೆ.ಎಂ.ಸಿ. ಮಣಿಪಾಲ ಇವರ ಸಹಯೋಗದೊಂದಿಗೆ ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ಆರೋಗ್ಯ ಮಾಹಿತಿ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಕೆ.ಎಂ.ಸಿ. ಮಣಿಪಾಲದ ನರರೋಗ ತಜ್ಞರಾದ ಡಾ. ಅರವಿಂದ ಎನ್. ಪ್ರಭು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಅಕ್ಯುಪೇಶನಲ್ ಥೆರಪಿ ವಿಭಾಗದ ಪ್ರಾಧ್ಯಾಪಕರಾದ ಡಾ. ಸೆಬಸ್ಟಿನ್ ಅನಿತಾ ಡಿಸೋಜಾ, ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ದಿವ್ಯಾ ಪ್ರಭು, ಪರ್ಕಳ ಲಯನ್ಸ್ & ಲಿಯೋ ಕ್ಲಬ್ ನ ರಾಧಾಕೃಷ್ಣ ಮೆಂಡನ್, ದಿವ್ಯಾಂಗ ರಕ್ಷಣಾ ಸಮಿತಿ ಕಾರ್ಯದರ್ಶಿ ಜಯ ಪೂಜಾರಿ ಕಲ್ಮಾಡಿ ಉಪಸ್ಥಿತರಿದ್ದರು. ಸ್ಟ್ರೋಕ್ ಸಮಸ್ಯೆಯ ಬಗ್ಗೆ ಡಾ. ಅರವಿಂದ ಎನ್. ಪ್ರಭು ಹಾಗೂ ಡಾ. ಸೆಬಸ್ಟಿನ್ ಅನಿತಾ ಡಿಸೋಜಾ ಅವರು ಮಾಹಿತಿ ನೀಡಿದರು. ಅಕ್ಯುಪೇಶನಲ್ ಥೆರಪಿ ವಿಭಾಗದ ವಿದ್ಯಾರ್ಥಿಗಳಿಂದ ಸ್ಟ್ರೋಕ್ ನ ಕುರಿತು ಕಿರು ಪ್ರಹಸನ ನಡೆಯಿತು. ನಂತರ ಶಿಬಿರಕ್ಕೆ ಬಂದವರಿಗೆ ನರ ಸಂಬಂಧಿತ ಸಮಸ್ಯೆ ಹಾಗೂ ಇನ್ನಿತರ ಆರೋಗ್ಯ ತಪಾಸಣೆ ನಡೆಸಲಾಯಿತು. ಡಾ. ದಲರಾಜ್, ಡಾ. ಜೆಲಿಟಾ, ಸಾಮಾಜಿಕ ಕಾರ್ಯಕರ್ತ ಮಹೇಶ್, ಅಕ್ಯುಪೇಶನ್ ವಿಭಾಗದ ಸದಿಚಾ ಕಾಮತ್, ಸಿ.ಹೆಚ್.ಓ. ಮೈತ್ರಿ, ಶುಶ್ರೂಷಕಿಯರಾದ ಸುರೇಖಾ & ಲವಿನಾ, ಸಿಬ್ಬಂದಿ ಸೃಜನ್ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!