Sunday, January 19, 2025
Sunday, January 19, 2025

ಕಂಬೈನ್ಡ್ ಹಾರ್ವೆಸ್ಟರ್ ಬಾಡಿಗೆ ದರ ನಿಗದಿ

ಕಂಬೈನ್ಡ್ ಹಾರ್ವೆಸ್ಟರ್ ಬಾಡಿಗೆ ದರ ನಿಗದಿ

Date:

ಉಡುಪಿ, ನ.8: ಜಿಲ್ಲಾಡಳಿತದ ವತಿಯಿಂದ ಕಂಬೈನ್ಡ್ ಹಾರ್ವೆಸ್ಟರ್ ದರ ನಿಗದಿ ಬಗ್ಗೆ ರೈತ ಸಂಘಟನೆಗಳು, ಯಂತ್ರ ಪೂರೈಕೆದಾರರು, ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖಾ ಅಧಿಕಾರಿಗಳನ್ನೊಳಗೊಂಡ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಿ, ಸಭೆಯಲ್ಲಿ ಎಲ್ಲಾ ಭಾಗಿದಾರರ ಅಭಿಪ್ರಾಯವನ್ನು ಪಡೆದು ಎಲ್ಲಾ ಮಾದರಿಯ ಕಂಬೈನ್ಡ್ ಹಾರ್ವೆಸ್ಟರ್ (ಕರ್ತಾರ್, ಕುಬೊಟೊ, ಕ್ಲಾಸ್ ಹಾಗೂ ಇತರೆ) ಸಾಗಾಟ ವೆಚ್ಚ ಹೊರತುಪಡಿಸಿ ಪ್ರತಿ ಗಂಟೆಗೆ 2000 ರೂ. ದರವನ್ನು ನಿಗಧಿಪಡಿಸಲಾಗಿರುತ್ತದೆ. ಸಾಗಾಟ ವೆಚ್ಚ ಸೇರಿದಂತೆ 2200 ರೂ. ನಿಗಧಿಪಡಿಸುವುದು ಸೂಕ್ತವೆಂಬ ಅಭಿಪ್ರಾಯವು ಸಭೆಯಲ್ಲಿ ವ್ಯಕ್ತವಾಗಿದ್ದು, ಸದ್ರಿ ದರಗಳನ್ವಯದಂತೆ ಯಂತ್ರ ಪೂರೈಕೆದಾರರು ಜಿಲ್ಲೆಯ ರೈತರಿಗೆ ಕಂಬೈನ್ಡ್ ಹಾರ್ವೆಸ್ಟರ್ ಅನ್ನು ಪೂರೈಕೆ ಮಾಡಬೇಕು. ಇದನ್ನು ಹೊರತುಪಡಿಸಿ ಯಂತ್ರ ಮಾಲಕರು, ಪೂರೈಕೆದಾರರು ಹಾಗೂ ಏಜೆಂಟರು ಅನಗತ್ಯ ಹೆಚ್ಚುವರಿಯಾಗಿ ದುಬಾರಿ ಬಾಡಿಗೆ ದರವನ್ನು ರೈತರಿಂದ ಸಂಗ್ರಹಿಸದಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿರುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!