ಕೋಟ, ನ.1: ಜನತಾ ಫಿಶ್ ಮೀಲ್ & ಆಯಿಲ್ ಪ್ರಾಡಕ್ಟ್ಸ್ ವತಿಯಿಂದ ದೀಪಾವಳಿಯ ಪ್ರಯುಕ್ತ ಹಬ್ಬ -2024(ಜನತಾದ ಹಣತೆಗಳ ಬೆಳಕಿನಲ್ಲಿ) ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಮುಖ್ಯಸ್ಥರಾದ ಆನಂದ ಸಿ ಕುಂದರ್ ಅವರು ಉದ್ಘಾಟಿಸಿದರು. ನಂತರ ಸಂಸ್ಥೆಯ ಸಿಬ್ಬಂದಿಗಳಿಂದ ನ್ರತ್ಯ, ಯಕ್ಷ ನ್ರತ್ಯ ಮತ್ತು ಅಜ್ಜ ಹೇಳಿದ ರಾಮಲೀಲಾ ಎನ್ನುವ ನಾಟಕವನ್ನು ಪ್ರದರ್ಶಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕರುಗಳಾದ ಪ್ರಶಾಂತ ಕುಂದರ್, ರಕ್ಷಿತ್ ಕುಂದರ್, ಸಂಸ್ಥೆಯ ಎ ಜಿ ಎಮ್ ಶ್ರೀನಿವಾಸ್ ಮತ್ತು ಕಾರ್ಖಾನೆಯ ವ್ಯವಸ್ಥಾಪಕರಾದ ಮಿಥುನ್ ಕುಮಾರ್ ಮತ್ತು ಸಂಸ್ಥೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜನತಾ ಫಿಶ್ ಮೀಲ್ & ಆಯಿಲ್ ಪ್ರಾಡಕ್ಟ್ಸ್: ದೀಪಾವಳಿ ಸಂಭ್ರಮ

ಜನತಾ ಫಿಶ್ ಮೀಲ್ & ಆಯಿಲ್ ಪ್ರಾಡಕ್ಟ್ಸ್: ದೀಪಾವಳಿ ಸಂಭ್ರಮ
Date: