Tuesday, February 25, 2025
Tuesday, February 25, 2025

ಸಂಗೀತದಿಂದ ಮಾನಸಿಕ ಒತ್ತಡ ಶಮನ: ರವಿ ಕಾರಂತ್

ಸಂಗೀತದಿಂದ ಮಾನಸಿಕ ಒತ್ತಡ ಶಮನ: ರವಿ ಕಾರಂತ್

Date:

ಕೋಟ, ಅ.30: ಬದುಕಿನ ಮಾನಸಿಕ ಒತ್ತಡಕ್ಕೆ ಸಂಗೀತ ಔಷಧವಿದ್ದಂತೆ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸಂಗೀತ ಅಭ್ಯಾಸ ಮಾಡಿಸುವುದರಿಂದ ಉತ್ತಮ ಹಾಡುಗಾರರನ್ನಾಗಿ ಮಾಡಲು ಸಾಧ್ಯ. ಸಂಗೀತ ಸ್ಪರ್ಧೆಯ ಆಯೋಜನೆಯಿಂದ ಹೊಸ ಪ್ರತಿಭೆಗಳು ಮುಖ್ಯವಾಹಿನಿಗೆ ಬರಲು ಸಹಕಾರಿ ಎಂದು ಸಂಗೀತಗಾರ, ಉಪನ್ಯಾಸಕ ರವಿ ಕಾರಂತ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಸಾರಥ್ಯದಲ್ಲಿ ಯು ಚಾನೆಲ್ ಸಾದರಪಡಿಸಿದ ರಾಜ್ಯೋತ್ಸವ ಅಂಗವಾಗಿ ಕರಾವಳಿ ಕರ್ನಾಟಕ ಕನ್ನಡ ಕರವೊಕೆ ಗೀತಗಾಯನ ಸ್ಪರ್ಧೆ ಹಚ್ಚೇವು ಕನ್ನಡದ ದೀಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಸಾಂಸ್ಕೃತಿಕ ಚಿಂತಕ ವೆಂಕಟೇಶ್ ಭಟ್, ಯು ಚಾನೆಲ್ ಸಂಚಾಲಕ ಪ್ರಸಾದ್ ರಾವ್, ಹಾಡುಗಾರರಾದ ಮಾಲಿನಿ ರಮೇಶ್, ಸುರೇಶ್ ಕಾರ್ಕಡ ಉಪಸ್ಥಿತರಿದ್ದರು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!