ಕೋಟ, ಅ.28: ಗೋವಿನ ಮಹತ್ವ ಅರಿತು ಅವುಗಳಿಗೆ ಮೇವು ಒದಗಿಸುವ ನಾಗೇಂದ್ರ ಪುತ್ರನ್ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕುಂದಾಪುರ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದರು. ಕೋಟದಲ್ಲಿ ನಾಗೇಂದ್ರ ಪುತ್ರನ್ ನೇತೃತ್ವದಲ್ಲಿ ಗೋವಿಗಾಗಿ ನಾವು ಪ್ರಚಾರಕ್ಕಲ್ಲ ಪ್ರೇರಣೆ ಆರನೇ ಸರಣಿ ಕಾರ್ಯಕ್ರಮದಲ್ಲಿ ಕೋಟದ ಭರತ್ ಗಾಣಿಗ ಹುಟ್ಟುಹಬ್ಬದ ಅಂಗವಾಗಿ ಸ್ಥಳೀಯ ಗೋಶಾಲೆಗಳಿಗೆ ಮೇವು ಹಸ್ತಾಂತರಿಸುವ ಸಭೆಯಲ್ಲಿ ಅವರು ಮಾತನಾಡಿದರು. ಗೋವಿಗಾಗಿ ನಾವು ತಂಡದ ಮುಖ್ಯಸ್ಥ ನಾಗೇಂದ್ರ ಪುತ್ರನ್, ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ ಗಿಳಿಯಾರು, ಪ್ರಗತಿಪರ ಕೃಷಿಕರಾದ ರವೀಂದ್ರ ಐತಾಳ್ ಪಾರಂಪಳ್ಳಿ, ಕಾಂಗ್ರೆಸ್ ಮುಖಂಡರಾದ ಗೋಪಾಲ್ ಬಂಗೇರ, ಗೋವಿಗಾಗಿ ನಾವು ತಂಡದ ವಸಂತ ಸುವರ್ಣ, ಗೋಪಾಲ್ ಮುಂತಾದವರು ಉಪಸ್ಥಿತರಿದ್ದರು. ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಚಂದ್ರ ಆಚಾರ್ ನಿರೂಪಿಸಿ ವಂದಿಸಿದರು.
ಗೋವಿಗಾಗಿ ನಾವು: ಮೇವು ಕೊಡುಗೆ

ಗೋವಿಗಾಗಿ ನಾವು: ಮೇವು ಕೊಡುಗೆ
Date: