Monday, October 28, 2024
Monday, October 28, 2024

ಭಜನೆ ವಿಭಜನೆಯನ್ನು ತಪ್ಪಿಸುತ್ತದೆ: ರತ್ನಾವತಿ ಜೆ ಬೈಕಾಡಿ

ಭಜನೆ ವಿಭಜನೆಯನ್ನು ತಪ್ಪಿಸುತ್ತದೆ: ರತ್ನಾವತಿ ಜೆ ಬೈಕಾಡಿ

Date:

ತೆಂಕನಿಡಿಯೂರು, ಅ.28: ಶ್ರೀ ಕಾಳಿಕಾಂಬಾ ಭಜನಾ ಸಂಘ (ರಿ) ತೆಂಕನಿಡಿಯೂರು ಇವರು ಶ್ರೀ ದೇವಿ ಮಹಿಳಾ ಮಂಡಳಿ ಮತ್ತು ಬಾಲಸಂಸ್ಕಾರ ಕೇಂದ್ರದ ಸಹಯೋಗದಲ್ಲಿ ಮನೆ ಮನೆಗೆ ಭಜನೆ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಯಶಸ್ವಿ 50 ಭಜನಾ ಕಾರ್ಯಕ್ರಮಗಳನ್ನು ಪೂರೈಸಿದ ಸಂದರ್ಭದಲ್ಲಿ 51ನೇ ಭಜನಾ ಸೇವೆಯನ್ನು ಶ್ರೀದೇವಿ ಮಹಿಳಾ ಮಂಡಳಿಯ ವತಿಯಿಂದ ಶ್ರೀ ಕಾಳಿಕಾಂಬಾ ಭಜನಾ ಸಂಘದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೈಕಾಡಿ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಇವರು ಭಜನಾ ತಂಡದ ಸದಸ್ಯರನ್ನು ಅಭಿನಂದಿಸುತ್ತಾ, “ಧಾರವಾಹಿ, ಮೊಬೈಲ್‌ ಗೀಳು ಅಂಟಿಸಿಕೊಳ್ಳುವುದಕ್ಕಿಂತ ಸಾಮೂಹಿಕ ಭಜನೆಯಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ, ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಸಹಕರಿಸುವ ಇಂತಹ ಅತ್ಯತ್ತಮ ಕಾರ್ಯಕ್ರಮ ನಿರಂತರವಾಗಿ ಮುಂದುವರೆಯಲಿ”ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಸುಚಿತ್ರ ಆಚಾರ್ಯ “ಶ್ರೀ ಕಾಳಿಕಾಂಬಾ ಭಜನಾ ಸಂಘದ ಗರ್ಭಗುಡಿಯ ನಿರ್ಮಾಣ ಹಂತದಲ್ಲಿರುವ ಈ ಸಂದರ್ಭದಲ್ಲಿ ಪ್ರಮುಖ ಪ್ರಾಯೋಜಕರಾದ ವಾಸುದೇವ ಆಚಾರ್ಯ ಗೀತಾ ಸಾ ಮಿಲ್‌ ಮಲ್ಪೆ ಇವರೊಂದಿಗೆ ಅಳಿಲು ಸೇವೆಯಾಗಿ ಸಮಾಜ ಬಾಂಧವರ ನೆರವು ಸಂಗ್ರಹಿಸಲು ಮನೆ ಮನೆಗೆ ಭಜನೆ ಎನ್ನುವ ಕಾರ್ಯಕ್ರಮ ಆಯೋಜಿಸಿದ್ದು, ಧನಸಂಗ್ರಹಕ್ಕಿಂತ ಮಿಗಿಲಾಗಿ ಭಜನಾ ತಂಡದ ಸದಸ್ಯರಲ್ಲಿ ಆತ್ಮವಿಶ್ವಾಸ ಮೂಡಿದೆ. ಭಜನೆ ಮಾಡಿದ ಮನೆಯವರೂ ತಂಡದ ಸದಸ್ಯರನ್ನು ಆತ್ಮೀಯವಾಗಿ ಉಪಚರಿಸಿ ಭಜನಾ ಸಂಘದ ಕಟ್ಟಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಈ ಕಾರ್ಯಕ್ರಮವು ಮುಂದುವರಿಯಲಿದ್ದು ಸರ್ವರ ಸಹಕಾರ ಅಗತ್ಯ” ಎಂದರು ಭಜನಾ ತಂಡದ ಸದಸ್ಯ ಉಮೇಶ್‌ ಜೆ ಆಚಾರ್ಯ ಮಾತನಾಡಿ “ಪ್ರತಿ ಮನೆಯಿಂದ ಭಜನಾ ಸಂಘದ ಗರ್ಭಗುಡಿ ನಿರ್ಮಾಣಕ್ಕೆ ಕೊಡುಗೆ ಇರಲಿ ಎಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಕ್ಕಳ, ಮಹಿಳೆಯರು ಮತ್ತು ಭಜನಾ ಸಂಘದ ಸದಸ್ಯರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ” ಎಂದು ಹೇಳುತ್ತಾ ಭಜನಾ ಸಂಘವನ್ನು ಕಟ್ಟಿ ಬೆಳೆಸಲು ದುಡಿದ ಹಿರಿಯರನ್ನು ಸ್ಮರಿಸಿದರು.

ನಿರಂತರವಾಗಿ ಭಜನೆಯೊಂದಿಗೆ ತಬಲಾದಲ್ಲಿ ಸಹಸಕರಿಸಿದ ಮನ್ವಿತ್‌ ಕೆ. ಆಚಾರ್ಯ ಮತ್ತು ಹಾರ್ಮೋನಿಯಂನಲ್ಲಿ ಸಹಕರಿಸಿದ ವಿಖ್ಯಾತ್‌ ಯು. ಆಚಾರ್ಯ ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಸಂಘದ ಅಧ್ಯಕ್ಷ ಟಿ. ಕೃಷ್ಣ ಆಚಾರ್ಯ ವಹಿಸಿದ್ದು, ವೇದಿಕೆಯಲ್ಲಿ ಪ್ರಧಾನ ಅರ್ಚಕ ಜನಾರ್ದನ ಆಚಾರ್ಯ, ಶ್ರೀ ದೇವಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಅಪ್ಪಿ ಶಿವಯ್ಯ ಆಚಾರ್ಯ, ಅಧ್ಯಕ್ಷೆ ಸುಶೀಲಾ ವಾದಿರಾಜ ಆಚಾರ್ಯ ಉಪಸ್ಥಿತರಿದ್ದರು. ಸುಷ್ಮಾ ರಾಜೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಉದಯ ಜೆ. ಆಚಾರ್ಯ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇಂದಿನ (ಅ.28) ಚಿನ್ನದ ದರ

ಚಿನ್ನ 22 CT- ರೂ. 7315 ಚಿನ್ನ 24 CT- ರೂ. 7868 ಬೆಳ್ಳಿ...

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ‘ಕನಸು’ ಕಾರ್ಯಕ್ರಮ

ಉಡುಪಿ, ಅ.28: ಪ್ರತಿಯೊಂದು ಸಾಧನೆಯೂ ಒಂದು ಕನಸಿನಿಂದ ಹುಟ್ಟಿಕೊಳ್ಳುತ್ತದೆ. ಅಂತಹ ನೂರಾರು...

ಮನ್ ಕಿ ಬಾತ್ ವೀಕ್ಷಣೆ

ಬೆಂಗಳೂರು, ಅ.28: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು...

ಜೀಸಿಐ ಉಡುಪಿ ಸಿಟಿ ಘಟಕಕ್ಕೆ ಅತ್ಯುತ್ತಮ ಘಟಕಾಧ್ಯಕ್ಷೆ ಪ್ರಶಸ್ತಿ

ಕಾಪು, ಅ.28: ಜೇಸಿಐ ಭಾರತ ವಲಯ 15 ರ ವಲಯ ಸಮ್ಮೇಳನ...
error: Content is protected !!