ಹಿರಿಯಡ್ಕ, ಅ.28: ಉಡುಪಿ-ಬೈಲೂರು-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಹಿರಿಯಡಕದಿಂದ ಗುಡ್ಡೆಯಂಗಡಿವರೆಗೆ ಐದಾರು ಕಿಲೋಮೀಟರ್ ರಸ್ತೆಯಲ್ಲಿ ಬೃಹದಾಕಾರದಲ್ಲಿ ಗುಂಡಿಗಳು
ಬಾಯ್ತೆರೆದುಕೊಂಡು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಟೆಂಡರ್ ಪ್ರಕ್ರಿಯೆಯಲ್ಲೇ ಕಾಲ ಕಳೆಯುತ್ತಿದೆ ಹೊರತು ಕಾಮಗಾರಿಯ ಮುನ್ಸೂಚನೆ ಕಾಣುತ್ತಿಲ್ಲ. ಹೊಂಡಗಳಿಂದ ರಸ್ತೆಯನ್ನೇ ಹುಡುಕುವಂತಾಗಿದೆ. ಹೊಂಡಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯ ದುರವಸ್ಥೆಯಿಂದಾಗಿ ವಾಹನಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ರಸ್ತೆಗಳು ಸಾವಿನ ಕೂಪವಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಆದ್ದರಿಂದ ಈ ಬಗ್ಗೆ ಅತಿ ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು.
ವಿಷ್ಣುಪ್ರಸಾದ್ ಕೊಡಿಬೆಟ್ಟು