Wednesday, February 26, 2025
Wednesday, February 26, 2025

ಬಾರಕೂರು ಸರ್ಕಾರಿ ಕಾಲೇಜಿನ ಪ್ರಯೋಗಾಲಯಕ್ಕೆ ಲ್ಯಾಪ್‌ಟಾಪ್‌ ವಿತರಣೆ

ಬಾರಕೂರು ಸರ್ಕಾರಿ ಕಾಲೇಜಿನ ಪ್ರಯೋಗಾಲಯಕ್ಕೆ ಲ್ಯಾಪ್‌ಟಾಪ್‌ ವಿತರಣೆ

Date:

ಬ್ರಹ್ಮಾವರ, ಅ.27: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರು ಇಲ್ಲಿನ ಗಣಕ ವಿಜ್ಞಾನ ವಿಭಾಗದ ಪ್ರಯೋಗಾಲಯಕ್ಕೆ ನೀವಿಯಸ್ ಸೆಲ್ಯೂಷನ್ ಮತ್ತು ಮೈಕ್ರೊಡಿಗ್ರಿ, ಮಂಗಳೂರು ಸಾಫ್ಟ್ವೇರ್ ಕಂಪನಿ ವತಿಯಿಂದ 20 ಲ್ಯಾಪ್‌ಟಾಪ್‌ಗಳನ್ನು ದೇಣಿಗೆ ನೀಡಲಾಯಿತು. ನೀವಿಯಸ್ ಸೆಲ್ಯೂಷನ್, ಮಂಗಳೂರು ಕಂಪನಿಯ ವಿನೀತ್ ಸರ್ವೋತ್ತಮ ಹಾಗೂ ಅಶ್ವಿನ್ ಮತ್ತು ಮೈಕ್ರೊಡಿಗ್ರಿ ಕಂಪನಿಯ ಪ್ರಜ್ವಲ್ ಮತ್ತು ಯಶಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಗಂಗಾಧರಯ್ಯ ಇವರು ಮೈಕ್ರೊಡಿಗ್ರಿಯ ಗೌರವ್ ಮತ್ತು ಅವರ ತಂಡದ ಸತತ ಪ್ರಯತ್ನ ಹಾಗೂ ನೀವಿಯಸ್ ಸೆಲ್ಯೋಷನ್ ಇವರ ಉದಾರ ದೇಣಿಗೆಯನ್ನು ಸ್ಮರಿಸಿದರು. ಲ್ಯಾಪ್‌ಟಾಪ್‌ಗಳು ಬರೀ ಗಣಕಯಂತ್ರಗಳಲ್ಲದೇ, ಇವು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಆಶಾಕಿರಣ ಎಂದು ತಿಳಿಸಿದರು.

ಪ್ರಾಂಶುಪಾಲರಾದ ಶೋಭಾ ಆರ್., ಮಾತನಾಡಿ, ವಿದ್ಯಾರ್ಥಿಗಳಿಗೆ ದೇಣಿಗೆಯಾಗಿ ದೊರೆತಿರುವ 20 ಲ್ಯಾಪ್‌ಟಾಪ್‌ಗಳು ಕಾಲೇಜಿನ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ‍್ಯದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಸ್ಮರಿಸಿ, ನೀವಿಯಸ್ ಹಾಗೂ ಮೈಕ್ರೊಡಿಗ್ರಿ ಕಂಪೆನಿಗೆ ಧನ್ಯವಾದ ತಿಳಿಸಿದರು. ನೀವಿಯಸ್ ಸೊಲ್ಯುಷನ್ ಕಂಪೆನಿಯ ವಿನೀತ್ ಸರ್ವೊತ್ತಮ ಇವರು ಕ್ಲೌಡ್ ಸಾಫ್ಟ್ವೇರ್ ಕ್ಷೇತ್ರದಲ್ಲಿ ತಮ್ಮ ಕಂಪೆನಿಯ ವಿಶೇಷ ಪರಿಣತಿ ಹಾಗೂ ಕೊಡುಗೆಯನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಮೈಕ್ರೊಡಿಗ್ರಿಯ ಪ್ರಜ್ವಲ್ ಹಾಗೂ ಯಶಸ್, ಮೈಕ್ರೊಡಿಗ್ರಿ ವತಿಯಿಂದ ಬಾರಕೂರಿನ ವಿದ್ಯಾರ್ಥಿಗಳಿಗೆ ಮಾತ್ರ ದೊರೆಯುವ ಉಚಿತ ಆನ್‌ಲೈನ್ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.

ಐಕ್ಯೂಎಸಿ ಸಂಚಾಲಕರಾದ ವಿದ್ಯಾ ಪಿ., ವಿದ್ಯಾರ್ಥಿ ಕ್ಷೇಮಪಾಲಕರಾದ ಹರೀಶ್ ಸಿ. ಕೆ., ಅಕಾಡೆಮಿಕ್ ಕೌನ್ಸಿಲ್‌ನ ಮುಖ್ಯಸ್ಥರಾದ ಡಾ. ಮಧು ಎನ್.ಎಂ., ಗಣಕ ವಿಜ್ಞಾನದ ಉಪನ್ಯಾಸಕರಾದ ರಾಘವೇಂದ್ರ ಎಚ್. ಎಸ್., ಮುಜತಾಬ ಫರ್ಹೀನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!