Sunday, October 27, 2024
Sunday, October 27, 2024

ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ

ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ

Date:

ಕೋಟ, ಅ.27: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಪಶು ಆಸ್ಪತ್ರೆ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್‌ನ ವಿವಿಧ ಭಾಗಗಳಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ ನಡೆಯಿತು. ಪಶು ಆಸ್ಪತ್ರೆ ಕೋಟದ ಪಶು ವೈದ್ಯಾಧಿಕಾರಿ ಅನಿಲ್ ಕುಮಾರ್ ಇವರು ರೇಬಿಸ್ ಚುಚ್ಚು ಮದ್ದು ನೀಡಿ ರೇಬಿಸ್ ರೋಗದ ಲಕ್ಷಣ, ತಡೆಗಟ್ಟುವಿಕೆ ಹಾಗೂ ಮುಂಜಾಗರೂಕತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಅವರು ಮಾತನಾಡಿ, ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ಉಚಿತವಾಗಿ ರೇಬಿಸ್ ಲಸಿಕೆಯನ್ನು ತಮ್ಮ ಮನೆಯ ಸಾಕು ನಾಯಿಗಳಿಗೆ ನೀಡಲು ಸೂಚಿಸಿ, ರೇಬಿಸ್ ರೋಗದ ಬಗ್ಗೆ ಭಯ ಬೇಡ ಎಚ್ಚರಿಕೆ ಇರಲಿ ಹಾಗು ಮುಂದಿನ ದಿನಗಳಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಕಾರ್ಯಕ್ರಮ ಮಾಡಿಸಲಾಗುವುದು ಎಂದು ತಿಳಿಸಿದರು. ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ ಮತ್ತು ಸರ್ವ ಸದಸ್ಯರು, ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಸಾರ್ವಜನಿಕರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಚಕ್ರತೀರ್ಥ ಸೇತುವೆ ಉದ್ಘಾಟನೆ

ಉಡುಪಿ, ಅ.27: ಉಡುಪಿ ನಗರಸಭೆಯ ಮೂಡುಸಗ್ರಿ ವಾರ್ಡಿನ ಚಕ್ರತೀರ್ಥ ಬಳಿ ಸುಮಾರು...

ಬೃಹತ್ ರಕ್ತದಾನ ಶಿಬಿರ

ಕೋಟ, ಅ.27: ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ ಆಶ್ರಯದಲ್ಲಿ ಯುವ ವೇದಿಕೆ...

ಗುರುವಿನಿಂದ ಕಲಿತ ಯಕ್ಷಶಿಕ್ಷಣ ಪರಿಪೂರ್ಣ

ಕೋಟ, ಅ.27: ಯಕ್ಷಗಾನ ಕಲಿಕೆಗೆ ಗುರು ಅತೀ ಮುಖ್ಯ. ಇಂತಹ ಗುರುತ್ವವನ್ನು...

ಪಂಚವರ್ಣ ಕಾರ್ಯಕ್ರಮ ವಿಶಿಷ್ಟ

ಕೋಟ, ಅ.27: ಪಂಚವರ್ಣ ಸಂಸ್ಥೆಯ ಕಾರ್ಯಕ್ರಮಗಳೇ ವಿಶಿಷ್ಟವಾದದ್ದು ಜತೆಗೆ ಮನೆಮಾತಾಗಿ ಬೆಳೆದು...
error: Content is protected !!