Wednesday, February 26, 2025
Wednesday, February 26, 2025

ಕಂಡು ಕೇಳರಿಯದ ಭ್ರಷ್ಟಾಚಾರ ದೇಶದ ಭವಿಷ್ಯವನ್ನು ಕರಾಳವಾಗಿಸುತ್ತಿದೆ: ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

ಕಂಡು ಕೇಳರಿಯದ ಭ್ರಷ್ಟಾಚಾರ ದೇಶದ ಭವಿಷ್ಯವನ್ನು ಕರಾಳವಾಗಿಸುತ್ತಿದೆ: ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

Date:

ಉಡುಪಿ, ಅ.27: ದೇಶದ ಸಂಪತ್ತನ್ನು ಕೆಲವು ರಾಜಕಾರಣಿಗಳು ಅಧಿಕಾರಿಗಳು ಲೂಟುತ್ತಿದ್ದು ಒಂದೊಂದು ಹಗರಣದಲ್ಲಿನ ಸಂಪತ್ತಿನ ಮೌಲ್ಯವೇ ದೇಶದ ಒಟ್ಟು ಬಜೆಟಿನ ಗಾತ್ರಕ್ಕಿಂತ ಹೆಚ್ಚಿದೆ ಇವತ್ತು ಬಹಳ ಸುಲಭವಾಗಿ ಹಣ ಮಾಡಬಹುದು ಎಂಬ ಕಾರಣಕ್ಕೆ ಯುವ ಸಮುದಾಯವೂ ರಾಜಕಾರಣಿಗಳಾಗಬೇಕೆಂದು ಅಪೇಕ್ಷೆ ಪಡುವಂಥ ದಯನೀಯ ಸ್ಥಿತಿ ಎದುರಾಗಿದೆ. ಇಂಥ ಗಂಭೀರ ಪರಿಸ್ಥಿತಿಗಳು ದೇಶದ ಭವಿಷ್ಯವನ್ನು ಮಂಕಾಗಿಸುತ್ತಿವೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆಯವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.‌

ಭಾನುವಾರ ಬೆಳಿಗ್ಗೆ ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀ ಸುಶ್ರೀಂದ್ರ ತೀರ್ಥರು ಮತ್ತು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಂಭೀರ ಸಮಾಲೋಚನೆ ನಡೆಸಿದರು. ಕೆಲವು ರಾಜ್ಯಗಳಲ್ಲಿನ ಒಂದೊಂದು ಹಗರಣದ ಮೊತ್ತ ಕೋಟ್ಯಂತರ ರೂಗಳಾಗಿದೆ.‌ ಯಾವ ಸಂವಿಧಾನ ಯಾವ ಕಾನೂನುಗಳಿಂದಲೂ ಇದರ ನಿಯಂತ್ರಣ ಅಸಾಧ್ಯ ಎಂಬಂತೆ ಅಗಿದೆ. ರಾಜಕಾರಣಿಗಳು ಕಾಯಿದೆ ಕಾನೂನು ಸಂವಿಧಾನಗಳೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಈ ಬೆಳವಣಿಗೆಗಳನ್ನು ನೋಡುವಾಗ ಬಹಳ ಬೇಸರವಾಗ್ತದೆ. ಆದ್ದರಿಂದ ಹೊಸ ಪೀಳಿಗೆಗೆ ದುರಾಸೆಯಿಂದ ದೂರವಿರಲು, ದೇಶಾಭಿಮಾನ ಹಾಗೂ ಮಾನವೀಯತೆಯ ಪಾಠ ಹೇಳಬೇಕಾಗಿದೆ ಎಂದರು. ಯತಿತ್ರಯರೂ ಹೆಗ್ಡೆಯವರ ವಿಚಾರಗಳಿಗೆ ಸಹಮತ ವ್ಯಕ್ತಪಡಿಸಿ ಅವರಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

51 ವಯಸ್ಸಿನಲ್ಲೂ ಸ್ಪೋಟಕ ಆಟ; ಗತ ವೈಭವ ನೆನಪಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್

ಮುಂಬಯಿ, ಫೆ.26: ಮಂಗಳವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ...

ಮಹಾಕುಂಭ ವೈಭವ- 45 ದಿನಗಳಲ್ಲಿ 65 ಕೋಟಿಗೂ ಹೆಚ್ಚು ಭಕ್ತರು, 3 ಲಕ್ಷ ಕೋಟಿ ರೂ. ಆದಾಯ

ಪ್ರಯಾಗರಾಜ್, ಫೆ.26: ಬುಧವಾರ ಮಹಾಶಿವರಾತ್ರಿಯಂದು ಸಂಪನ್ನಗೊಂಡ ಮಹಾಕುಂಭಮೇಳ ಕಳೆದ 45 ದಿನಗಳಲ್ಲಿ...

ಜೆಇಇ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಫಲಿತಾಂಶ: ಕ್ರಿಯೇಟಿವ್ ಸಾಧನೆ

ಉಡುಪಿ, ಫೆ.26: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್.ಟಿ.ಎ) ವತಿಯಿಂದ ನಡೆಸಲಾದ ಜೆಇಇ...

ಪರೀಕ್ಷಾ ತರಬೇತಿ

ಕುಂದಾಪುರ, ಫೆ.26: ಜೆಸಿಐ ಶಂಕರನಾರಾಯಣ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ...
error: Content is protected !!