ಉಡುಪಿ, ಅ.25: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ಉಪಶಾಮಾಕ ಆರೈಕೆ ದಿನದ ಜಾಗೃತಿ ಅಭಿಯಾನದ ಭಾಗವಾಗಿ ಜಾಗೃತಿ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಡಿಗೆಯು ಬೋರ್ಡ್ ಹೈಸ್ಕೂಲ್ ಉಡುಪಿಯಿಂದ ಆರಂಭವಾಗಿ ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿ ವರೆಗೆ ಸಾಗಲಿದೆ. ತದನಂತರ ಸಮಾರೂಪ ಕಾರ್ಯಕ್ರಮವು ನಡೆಯಲಿದೆ. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಅದಾನಿ ಪವರ್ ನ ಸ್ಥಾನಿಕ ಮುಖ್ಯಸ್ಥರಾದ ಶ್ರೀಧರ್ ಗಣೇಶನ್, ಡಾ. ಜಿ ಶಂಕರ್, ಮಾಹೆ ಮಣಿಪಾಲದ ಡಾ. ಶರತ್ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಅ.26: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ಜಾಗೃತಿ ನಡಿಗೆ

ಅ.26: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ಜಾಗೃತಿ ನಡಿಗೆ
Date: