Sunday, January 19, 2025
Sunday, January 19, 2025

ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘ: ಸುವರ್ಣ ಮಹೋತ್ಸವ

ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘ: ಸುವರ್ಣ ಮಹೋತ್ಸವ

Date:

ಕೋಟ, ಅ.23: ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮ ಸಾಲಿಗ್ರಾಮದ ಸಂಘದ ವಠಾರದಲ್ಲಿ ಜರಗಿತು. ಸಂಘದ ವಿಸ್ತ್ರತ ಕಟ್ಟಡವನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ ಉದ್ಘಾಟಿಸಿದರು. ದ.ಕ. ಸಹಕಾರಿ ಹಾಲು ಒಕ್ಕೂಟ ಮಂಗಳೂರು ಉಪಾಧ್ಯಕ್ಷ ಜಯರಾಮ ರೈ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ.ಕ ಹಾಲು ಸಹಕಾರಿ ಉತ್ಪಾದಕರ ಒಕ್ಕೂಟದ ಮಾಜಿ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಗೋ ಪೂಜೆ ನೆರವೇರಿಸಿದರು. ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಗಾಣಿಗ ಅಧ್ಯಕ್ಷತೆ ವಹಿಸಿದ್ದರು ಹೆಚ್ಚು ಹಾಲು ಹಾಕಿದ ಸದಸ್ಯರಾದ ರಾಘವೇಂದ್ರ (ರಘು) ಮಧ್ಯಸ್ಥ, ಬಲರಾಮ ನಕ್ಷತ್ರಿ, ರಾಜು ದೇವಾಡಿಗ ಅವರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಒಕ್ಕೂಟದ ಅಧಿಕಾರಿಗಳಾದ ಡಾ. ಅನಿಲ್ ಕುಮಾರ್ ಶೆಟ್ಟಿ, ಒಕ್ಕೂಟದ ವಿಸ್ತರಣಾಧಿಕಾರಿ ಸರಸ್ವತಿ, ಸುಜಾತ ಬಾಯರಿ ಇವರುಗಳನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷರಾದ ಶ್ರೀಕಾಂತ ಐತಾಳ, ಪಿ ನರಸಿಂಹ ಹೇರ್ಳೆ, ಶಂಕರನಾರಾಯಣ ಹೊಳ್ಳ, ಸಂಘದ ಹಾಲಿ ಅಧ್ಯಕ್ಷ ಗಣೇಶ ಗಾಣಿಗ, ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ನಿಜಾಮ್ ಪಾಟೀಲ್ ಗುಣಿಗಾರ್, ಸಂಘದ ಮಾಜಿ ಮುಖ್ಯಕಾರ್ಯನಿರ್ವಾಹಕರಾದ ಶ್ರೀನಿವಾಸ ಹೇರ್ಳೇ, ಶ್ರೀನಿವಾಸ ಐತಾಳ, ಸೂರ್ಯನಾರಾಯಣ ಹೊಳ್ಳ, ಪ್ರಸ್ತುತ ಮುಖ್ಯಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಸುರೇಶ ನಾಯರಿ, ಮಾಜಿ ಕಾರ್ಯದರ್ಶಿಗಳಾದ ಶಂಕರನಾರಾಯಣ ಐತಾಳ, ನಾಗರಾಜ ಐತಾಳ, ಗಾಂಧಿ ಐತಾಳ್, ಶಕುಂತಳ, ಸ್ಥಾಪಕ ಕಾರ್ಯದರ್ಶಿ ಪಿ.ವಿ ಶ್ರೀನಿವಾಸ ಐತಾಳ್, ವಿವಿಧ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರನ್ನು ಸೇರಿದಂತೆ ಮಾಜಿ ನಿರ್ದೇಶಕರಗಳನ್ನು ಗುರುತಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ರವಿರಾಜ ಹಗ್ಡೆ, ಒಕ್ಕೂಟದ ಮಾಜಿ ಅಧ್ಯಕ್ಷ ಜಗದೀಶ್ ಕಾರಂತ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ನರಸಿಂಹ ಕಾಮತ್, ಎಮ್ ಸುಧಾಕರ ಶೆಟ್ಟಿ, ಸ್ಮಿತಾ ಆರ್ ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಒಕ್ಕೂಟದ ವ್ಯವಸ್ಥಾಪಕ ಡಾ. ರವಿರಾಜ ಉಡುಪ, ದ.ಕ ಸಹಕಾರಿ ಹಾಲು ಒಕ್ಕೂಟ ಮಂಗಳೂರು ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ದ.ಕ ಸಹಕಾರಿ ಹಾಲು ಒಕ್ಕೂಟ ಮಂಗಳೂರು ಮಾಜಿ ನಿರ್ದೇಶಕಿ ಜಾನಕಿ ಹಂದೆ, ಅಘೋರೇಶ್ವರ ದೇಗುಲ ಕಾರ್ತಟ್ಟು ಇದರ ಮೊಕ್ತೇಸರ ಚಂದ್ರಶೇಖರ ಕಾರಂತ ಉಪಸ್ಥಿತರಿದ್ದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ, ಚಂಡೆಯ ನಾದದೊಂದಿಗೆ ಮೆರವಣಿಗೆಯ ಮೂಲಕ ಅತಿಥಿಗಳನ್ನು ಸಂಘಕ್ಕೆ ಕರೆತೆರಲಾಯಿತು. ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜ್ಯೋತಿ ಸುರೇಶ ನಾಯರಿ ವರದಿ ವಾಚಿಸಿದರು. ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಶ್ರೀನಿವಾಸ ಸೋಮಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಘದ ನಿರ್ದೇಶಕ ಸುಬ್ರಾಯ ಉರಾಳ ಸ್ವಾಗತಿಸಿ, ಸುಜಾತ ಬಾಯರಿ ನಿರೂಪಿದರು .ಸಂಘದ ಉಪಾಧ್ಯಕ್ಷ ರಮೇಶ ಹಂದೆ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!