ಕೋಟ, ಅ.21: ಸ್ನೇಹಕೂಟ ಮಣೂರು ಇದರ ಅಕ್ಟೋಬರ್ ತಿಂಗಳ ಕಾರ್ಯಕ್ರಮ ಮಣೂರು ದೇವಸ್ಥಾನದ ಆಡಳಿತ ಮಂಡಳಿ ಅವರ ಸಹಯೋಗದೊಂದಿಗೆ ಮಣೂರು ದೇವಸ್ಥಾನದ ವಠಾರದಲ್ಲಿ ನಡೆಯಿತು. ಅಂಗಾಂಗ ದಾನದ ಮಹತ್ವ ಅರಿವು ಮೂಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕೋಟದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಮಾಧವ ಪೈ ಅಂಗಾಂಗ ದಾನದ ಬಗ್ಗೆ ಅರಿವು ಅದರ ಮಹತ್ವದ ಬಗ್ಗೆ ಸಮರ್ಪಕ ಮಾಹಿತಿ ನೀಡಿದರು. ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಎಚ್ ಕುಂದರ್ ಕಾರ್ಯಕ್ರಮ ಉದ್ಘಾಟಿಸಿ ಅಂಗಾಂಗ ದಾನದ ಕ್ರಿಯೆಯಲ್ಲಿ ಕುಟುಂಬದವರ ಸಹಕಾರ ಪ್ರೋತ್ಸಾಹ ಬಹಳ ಅಗತ್ಯ. ಇದೊಂದು ಮನುಷ್ಯನ ಜೀವಿತದ ಅವಧಿಯಲ್ಲಿಯ ಮಹತ್ತರವಾದ ಕಾರ್ಯವಾಗಿದೆ ಎಂದರು. ಸ್ನೇಹಕೂಟದ ಸದಸ್ಯೆಯೊಬ್ಬರ ಪತಿಯ ಅನಾರೋಗ್ಯ ನಿಮಿತ್ತ ಆಸ್ಪತ್ರೆ ವೆಚ್ಚಕ್ಕಾಗಿ ಅವರಿಗೆ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು. ಸಂಚಾಲಕಿ ಭಾರತಿ ಮಯ್ಯ ಉಪಸ್ಥಿತರಿದ್ದರು. ಸುಜಾತ ಬಾಯಿರಿ ಕಾರ್ಯಕ್ರಮ ನಿರೂಪಿಸಿದರು. ಸ್ಮಿತಾರಾಣಿ ವಂದಿಸಿದರು. ಬಳಿಕ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.
ಅಂಗಾಂಗ ದಾನದ ಅರಿವು

ಅಂಗಾಂಗ ದಾನದ ಅರಿವು
Date: