ಉಡುಪಿ, ಅ.17: ಕಾರ್ಕಳದ ರೆಂಜಾಳ ನಾಯಕ್ ಕುಟುಂಬದ ಹಿರಿಯರಾದ ‘ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್ (76)’ ಅಕ್ಟೋಬರ್ 16 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. 55 ಕ್ಕೂ ಹೆಚ್ಚಿನ ವರ್ಷಗಳ ಕಾಲ ದಿನಸಿ ಅಂಗಡಿ, ಹೋಟೆಲ್ ಉದ್ಯಮ ಯಶಸ್ವಿಯಾಗಿ ನಡೆಸಿ “ರೆಂಜಾಳ ಲಕ್ಷ್ಮಣೇರ್” ಎಂದೇ ಜನಪ್ರಿಯರಾಗಿಯೂ, ಪ್ರಗತಿಪರ ಕೃಷಿಕಾರ್ಯದಲ್ಲಿ ಸಾಧಕರಾಗಿಯೂ, ಕುಗ್ರಾಮದಲ್ಲಿ ಆಸ್ಪತ್ರೆಯಿಲ್ಲದೆ ದೂರದ ತಾಲೂಕಿನ ದೊಡ್ಡ ಆಸ್ಪತ್ರೆಗೆ ಹೋಗಬೇಕಾದ ಕಾಲದಿಂದಲೂ ನಾಟಿ ಔಷಧಿಯನ್ನು ಅದರಲ್ಲೂ ವಿಶೇಷತಃ ಜಾಂಡಿಸ್ (ಕಾಮಾಲೆ) ರೋಗ, ಸರ್ಪಸುತ್ತಿನಂತಹ ಕಾಯಿಲೆಗೆ ದೀನ ದುರ್ಬಲರಿಗೆ ಉಚಿತವಾಗಿ ನೀಡಿ ಸಮಾಜ ಸೇವಕರಾಗಿಯೂ, ತಲೆಮಾರುಗಳಿಂದ ರೆಂಜಾಳ ಮಾರಿಗುಡಿಯಲ್ಲಿ ಸೇವಾರೂಪದಲ್ಲಿ ನಿರಂತರ ದೇವಿಯ ನಿತ್ಯಸೇವೆಯನ್ನು ನಿರಪೇಕ್ಷೆ, ನಿಸ್ವಾರ್ಥರೂಪದಲ್ಲಿ ಸಲ್ಲಿಸಿದಕ್ಕೆ ದೇವಳದ ಜೀರ್ಣೋದ್ಧಾರದ ಸಂದರ್ಭದಲ್ಲಿ ಸನ್ಮಾನಿತರಾಗಿಯೂ, ಕುಗ್ರಾಮದಲ್ಲಿ ಶಾಲೆಯೇ ಇಲ್ಲದ ಸಂದರ್ಭದಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗಲೇಬಾರದೆಂದು ತಮ್ಮ ಸ್ವಂತ ಸ್ಥಳವನ್ನೇ ಉಚಿತವಾಗಿ ದಾನ ನೀಡಿ ಸರ್ಕಾರಿ ಅಂಗನವಾಡಿ ಕಟ್ಟಡ ಕಟ್ಟಿಸಿ ಶ್ರೇಷತೆ ಮೆರೆದಿದ್ದ ನಾಯಕರು ಪತ್ನಿ, 2 ಪುತ್ರ, ಪುತ್ರಿ, ಮೊಮ್ಮಕ್ಕಳು ಸಹಿತ ಅಪಾರ ಬಾಂಧವರನ್ನು ಅಗಲಿದ್ದಾರೆ.
ಸಮಾಜ ಸೇವಕ ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್ ನಿಧನ

ಸಮಾಜ ಸೇವಕ ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್ ನಿಧನ
Date: