ಕೋಟ, ಅ.16: ಅನಾಥ ಗೋವುಗಳ ಆರೈಕೆ ಮಾಡುತ್ತಿರುವ ಗೋಶಾಲೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ ಜಯರಾಮ ಶೆಟ್ಟಿ ಹೇಳಿದರು. ಕೋಟತಟ್ಟು ಪಡುಕರೆಯಲ್ಲಿ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹುಟ್ಟುಹಬ್ಬದ ಅಂಗವಾಗಿ ನಾಗೇಂದ್ರ ಪುತ್ರನ್ ಸಾರಥ್ಯದಲ್ಲಿ ಗೋವಿಗಾಗಿ ನಾವು ಪ್ರಚಾರಕ್ಕಲ್ಲ ಪ್ರೇರಣೆಗಾಗಿ ೪ ನೇ ಸರಣಿ ಕಾರ್ಯಕ್ರಮವನ್ನು ಚಾಲನೆ ನೀಡಿ ಅವರು ಮಾತನಾಡಿದರು. ಗೋಶಾಲೆಗಳನ್ನು ನಡೆಸುವುದು ಸುಲಭದ ಮಾತಲ್ಲ ಬದಲಾಗಿ ನಾವುಗಳು ಗೋವುಗಳ ಬಗ್ಗೆ ನೈಜ ಕಾರ್ಯಕ್ರಮಗಳನ್ನು ನೀಡಬೇಕು. ಈ ದಿಸೆಯಲ್ಲಿ ಗೋವಿಗಾಗಿ ನಾವು ಈ ತಂಡದ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು. ಗೋಪಾಲ್ ಬಂಗೇರ, ಗೋವಿಗಾಗಿ ನಾವು ತಂಡದ ಮುಖ್ಯಸ್ಥ ನಾಗೇಂದ್ರ ಪುತ್ರನ್, ಭರತ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಉದ್ಯಮಿ ವಿಕಾಸ್ ಹೆಗ್ಡೆ ಉಡುಪಿ ಇವರು ಮೇವು ಕೊಡುಗೆಯಾಗಿ ನೀಡಿದರು.
ಗೋವಿಗಾಗಿ ನಾವು ಅಭಿಯಾನದ 4ನೇ ಸರಣಿ ಕಾರ್ಯಕ್ರಮ

ಗೋವಿಗಾಗಿ ನಾವು ಅಭಿಯಾನದ 4ನೇ ಸರಣಿ ಕಾರ್ಯಕ್ರಮ
Date: