Saturday, October 12, 2024
Saturday, October 12, 2024

ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮ

ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮ

Date:

ಕೋಟ, ಅ.12: ಕಾರಂತರ ಬದುಕೆ ವಿಸ್ಮಯ. ಅವರ ನೇರ ನಡೆ ನುಡಿ ಬದುಕಿನ ತಳಹದಿಗೆ ಭದ್ರ ಬುನಾದಿ ನೀಡಿದೆ ಎಂದು ಸಾಹಿತಿ ನರೇಂದ್ರ ಕುಮಾರ್ ಕೋಟ ಅಭಿಪ್ರಾಯಪಟ್ಟರು. ಡಾ. ಕೋಟ ಶಿವರಾಮ ಕಾರಂತ ಸಂಶೋಧನ ಮತ್ತು ಅಧ್ಯಯನ ಟ್ರಸ್ಟ್ ಮಾನಸ ಸಾಲಿಗ್ರಾಮ, ಕಡಲ ತಡಿಯ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಕಾರಂತರ ಕಾದಂಬರಿಗಳು ನೈಜ ಜೀವನದ ಆಯಾಮಗಳನ್ನು ತಿಳಿಸುವುದರ ಜತೆಗೆ ಸಾಹಿತಿಕ ಪ್ರಕಾರಗಳಿಗೆ ಮುನ್ನುಡಿ ಬರೆದಿಎದ್. ಕಾರಂತರ ಬಹುಮುಖ ಕಲಾಪ್ರಕಾರಗಳು ವಿಶ್ವಮಟ್ಟದಲ್ಲಿ ತೆರೆದುಕೊಂಡು ವಿಶ್ವಕೋಶವಾಗಿ ಜನಮಾನಸದಲ್ಲಿ ನೆಲೆಯಾದರು. ಅವರ ಪರಿಸರ ಪ್ರಜ್ಞೆ ವಿಚಾರಧಾರೆ ಮುಂದಿನ ತಲೆಮಾರಿನತ್ತ ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ವಿಶೇಷ ಆಸಕ್ತಿಯಿಂದ ಅಧ್ಯಯನ ನಡೆಸಿ ಕಾರಂತರಂತೆ ಆಗಲಿ ಎಂದರು. ಅಧ್ಯಯನ ಕೇಂದ್ರದ ವಿಶ್ವಸ್ಥ ಮಂಡಳಿಯ ಪ್ರಮುಖರಾದ ಗುಜ್ಜಾಡಿ ಪ್ರಭಾಕರ್ ನಾಯಕ್ ಪ್ರಾಸ್ತಾವನೆ ಸಲ್ಲಿಸಿ ಕಾರಂತ ಕಲಾ ಸಾಹಿತ್ಯಿಕ ಬದುಕಿನ ಕೇಂದ್ರದ ಬಗ್ಗೆ ಮತ್ತಷ್ಟು ಅಭಿವೃದ್ಧಿಗೆ ವೇದಿಕೆ ಕಲ್ಪಿಸುವ ಎಂದರು.

ಆಭರಣ ಜ್ಯುವೆಲ್ಲರ್ಸ್ ಉಡುಪಿ ಇದರ ಆಡಳಿತ ನಿರ್ವಾಹಕ ನಿರ್ದೇಶಕರಾದ ಸುಭಾಸ್ ಎಂ. ಕಾಮತ್, ಮಹೇಶ್ ಎಂ ಕಾಮತ್, ಸಂಧ್ಯಾ ಎಸ್ ಕಾಮತ್, ಬ್ರಹ್ಮಾವರ ಕಸಾಪ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್, ವಿಶ್ವಸ್ಥ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಗುರುರಾಜ್ ಕೋಟೇಶ್ವರ ಸ್ವಾಗತಿಸಿ ನಿರೂಪಿಸಿದರು. ಕಾರ್ಯದರ್ಶಿ ನಾರಾಯಣ ಆಚಾರ್ ವಂದಿಸಿದರು. ಕಾರಂತರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಹಿಳಾ ಪೌರ ಕಾರ್ಮಿಕರ ಪಾದಪೂಜೆ

ತುಮಕೂರು, ಅ.12: ತುಮಕೂರಿನ ಚಿಕ್ಕನಾಯಕನಹಳ್ಳಿ ಪಟ್ಟಣದ ಶಕ್ತಿ ಮಾತೆ ಶ್ರೀ ಮಹಾಲಕ್ಷ್ಮೀ...

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ನೋಂದಣಿ ಆರಂಭ

ನವದೆಹಲಿ, ಅ.12: ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗಾಗಿ ಶನಿವಾರ ಸಂಜೆ ಆನ್‌ಲೈನ್...

ಮಣಿಪಾಲ ಜ್ಞಾನಸುಧಾ: ಶಾರದಾ ಪೂಜೆ

ಮಣಿಪಾಲ, ಅ.12: ಅಕ್ಟೋಬರ್‌ 12ರಂದು ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ವಿದ್ಯಾನಗರದಲ್ಲಿ...

ಕೋಟ ಅಮೃತೇಶ್ವರಿ ದೇಗುಲದಲ್ಲಿ ವೈಭವದ ಶರನ್ನವರಾತ್ರಿ ಸಂಪನ್ನ

ಕೋಟ, ಅ.12: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ...
error: Content is protected !!