Saturday, March 1, 2025
Saturday, March 1, 2025

ಉಡುಪಿ ಸೀರೆ- ವಿಶೇಷ ಅಂಚೆ ಲಕೋಟೆ ಅನಾವರಣ

ಉಡುಪಿ ಸೀರೆ- ವಿಶೇಷ ಅಂಚೆ ಲಕೋಟೆ ಅನಾವರಣ

Date:

ಉಡುಪಿ: ಭೌಗೋಳಿಕ ಮಾನ್ಯತೆ ಇರುವ ಹಾಗೂ ಉಡುಪಿಯ ಹೆಮ್ಮೆಯ ಪ್ರತೀಕವಾದ ಉಡುಪಿ ಸೀರೆಯ ಪ್ರಾಮುಖ್ಯತೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಭಾರತೀಯ ಅಂಚೆ ಇಲಾಖೆ ಉಡುಪಿ ಸೀರೆಯ ವಿಶೇಷ ಅಂಚೆ ಲಕೋಟೆಯನ್ನು ಹೊರತಂದಿದ್ದು ಅದನ್ನು ಉಡುಪಿ ಅಂಚೆ ವಿಭಾಗದಲ್ಲಿ ಬಿಡುಗಡೆಗೊಳಿಸಲು ತುಂಬ ಸಂತಸವಾಗುತ್ತದೆ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿ ಪ್ರಧಾನ ಅಂಚೆ ಕಚೇರಿಯ ಎರಡನೇ ಮಹಡಿಯಲ್ಲಿ ಉಡುಪಿ ಸೀರೆ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಮಾತನಾಡುತ್ತಾ, ಹಲವು ವರುಷಗಳ‌ ಹಿಂದೆ ಪದ್ಮಶಾಲಿ ಕುಟುಂಬದವರು ಮಾತ್ರವಲ್ಲದೆ ಇತರ ಜನರೂ‌ ಕೂಡಾ ಅಧಿಕ ಸಂಖ್ಯೆಯಲ್ಲಿ ಉಡುಪಿ ಸೀರೆ ಹಾಗೂ ಕೈ ಮಗ್ಗದ ಸೀರೆಗಳನ್ನು‌ ನೇಯುತ್ತಲಿದ್ದು ಇತ್ತೀಚಿನ ದಿನಗಳಲ್ಲಿ ಕೈ ಮಗ್ಗದ ಸೀರೆಗಳನ್ನು ನೇಯುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದ್ದು ಬೆರಳೆಣಿಕೆಯ ಹಿರಿಯರಷ್ಟೇ ಈ ವೃತ್ತಿಯನ್ನು‌ ಮುಂದುವರೆಸಿಕೊಂಡು ಬರುತ್ತಿದ್ದು ಉಡುಪಿ ಸೀರೆಯ ನೇಯ್ಗೆ ಕಾಯಕಕ್ಕೆ ಪುನಃಶ್ಚೇತನ ನೀಡಬೇಕಾಗಿದೆ ಎಂದರು.

ಇವತ್ತಿಗೂ ನೇಯ್ಗೆ ಕೆಲಸ ನಡೆಸುತ್ತಿರುವ ಹಿರಿಯ ನೇಕಾರರಾದ ಮಂಜುನಾಥ ಶೆಟ್ಟಿಗಾರ್ ರವರನ್ನು ಉಡುಪಿ ಅಂಚೆ ವಿಭಾಗದ ವತಿಯಿಂದ ಅಂಚೆ ಅಧೀಕ್ಷಕರು ಸನ್ಮಾನಿಸಿದರು.

ಹಿರಿಯ ಅಂಚೆ ಚೀಟಿ ಸಂಗ್ರಾಹಕ ಎಮ್ ಕೆ ಕೃಷ್ಣಯ್ಯ ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣ ರಾಜ‌ವಿಠಲ ಭಟ್ ಸ್ವಾಗತಿಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕರಾದ ಗುರುಪ್ರಸಾದ್ ಪ್ರಸ್ತಾವನೆಯ ಮಾತುಗಳನ್ನಾಡಿದರು.

ಅಂಚೆ ಇಲಾಖಾ ಸಿಬ್ಬಂದಿ ಸುರೇಂದ್ರ ಕೋಟ್ಯಾನ್ ಪ್ರಾರ್ಥಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ವಂದಿಸಿದರು.

ಉಪ ಅಂಚೆ ನಿರೀಕ್ಷಕ ಮಾಧವ ಟಿ ವಿ ಉಪಸ್ಥಿತರಿದ್ದರು. ಅಂಚೆ ಇಲಾಖಾ ಸಿಬ್ಬಂದಿ ಲೀಲಾವತಿ ತಂತ್ರಿ ನಿರೂಪಿಸಿದರು. ಮಹಿಳಾ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಡುಪಿ ಸೀರೆ ಉಟ್ಟು ಸಂಭ್ರಮಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬ್ರಹ್ಮಾವರ: ವಾಹನ ಸಂಚಾರದಲ್ಲಿ ಬದಲಾವಣೆ

ಉಡುಪಿ, ಫೆ.27: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು-ಮುಂಡ್ಕಿನಜೆಡ್ಡು-ಕೊಕ್ಕರ್ಣೆ-ನಾಲ್ಕೂರು (ಕೊಕ್ಕರ್ಣೆ- ನಾಲ್ಕೂರು ರಸ್ತೆ)...

ಹೀಟ್ ವೇವ್ (ಶಾಖದ ಹೊಡೆತ): ಸಾರ್ವಜನಿಕರು ರಕ್ಷಿಸಿಕೊಳ್ಳಲು ಸಲಹೆ-ಸೂಚನೆಗಳು

ಉಡುಪಿ, ಫೆ.27: ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ...

ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ಐವರು ಹಿರಿಯ ರಂಗಕರ್ಮಿಗಳು ಆಯ್ಕೆ

ಉಡುಪಿ, ಫೆ.27: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್...

ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗ ಅಧ್ಯಕ್ಷರಾಗಿ ಉದಯ ನಾಯ್ಕ್ ಆಯ್ಕೆ

ಉಡುಪಿ, ಫೆ.27: ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗಕ್ಕೆ...
error: Content is protected !!