Sunday, January 19, 2025
Sunday, January 19, 2025

ಮಾಣಿಬೆಟ್ಟು- ಪ್ರಾಚ್ಯ: ತೌಳವ ಕರ್ಣಾಟ ಶೀರ್ಷಿಕೆಯಡಿಯಲ್ಲಿ ಪುಷ್ಕರಣಿ ಸ್ವಚ್ಛತಾ ಕಾರ್ಯಕ್ರಮ

ಮಾಣಿಬೆಟ್ಟು- ಪ್ರಾಚ್ಯ: ತೌಳವ ಕರ್ಣಾಟ ಶೀರ್ಷಿಕೆಯಡಿಯಲ್ಲಿ ಪುಷ್ಕರಣಿ ಸ್ವಚ್ಛತಾ ಕಾರ್ಯಕ್ರಮ

Date:

ಶಿರ್ವ, ಅ.6: ಶ್ರೀನಿಕೇತನ ವಸ್ತುಸಂಗ್ರಹಾಲಯ & ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆ ಸುಬ್ರಹ್ಮಣ್ಯ, ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಹಾಗೂ ಉಡುಪಿಗೆ ಬನ್ನಿ-ಯೂಟ್ಯೂಬ್ ಚಾನೆಲ್ ಇವರ ಜಂಟಿ ಸಹಯೋಗದಲ್ಲಿ ಪ್ರಾಚ್ಯ: ತೌಳವ ಕರ್ಣಾಟ ಎಂಬ ಶೀರ್ಷಿಕೆಯಡಿಯಲ್ಲಿ ಶಿರ್ವ ಗ್ರಾಮದ ವ್ಯಾಪ್ತಿಗೆ ಒಳಪಡುವ ಮಾಣಿಬೆಟ್ಟು ಪ್ರದೇಶದಲ್ಲಿನ ಪ್ರಾಚೀನ ಪುಷ್ಕರಣಿಯ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುಷ್ಕರಣಿಯಿರುವ ಸ್ಥಳದ ಮಾಲೀಕರಾದ ಬಾಲಕೃಷ್ಣ ಉಪಾಧ್ಯಾಯ ಇವರ ನೇತೃತ್ವದಲ್ಲಿ ಸಮಾಜ ಸೇವಕ ಮತ್ತು ಕೊಡುಗೈ ದಾನಿ ವಿಶ್ವನಾಥ್ ಶೆಣೈ ಅವರು ನೆರವೇರಿಸಿದರು.

ಮುಖ್ಯ ಸಂಯೋಜಕರಾದ ಶ್ರೀನಿಕೇತನ ವಸ್ತುಸಂಗ್ರಹಾಲಯ & ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆ ಸುಬ್ರಹ್ಮಣ್ಯ ಇದರ ಉಪ ನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ ಜೊತೆ ಸಹ ಸಂಯೋಜಕರಾಗಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ ಕೃಷ್ಣಯ್ಯ ಮತ್ತು ಉಡುಪಿಗೆ ಬನ್ನಿ-ಯೂಟ್ಯೂಬ್ ಚಾನೆಲ್ ಇದರ ಸ್ಥಾಪಕರಾದ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಉಪಸ್ಥಿತರಿದ್ದರು.

ಗತವೈಭವನ್ನು‌ ಮುಂದಿನ‌ ಪೀಳಿಗೆಗೆ ತಿಳಿಸಲು ಇಂತಹ ಇತಿಹಾಸ ಉಳಿಸಿ, ಸಂರಕ್ಷಿಸುವ ಕಾರ್ಯಗಳು ಇನ್ನೂ ನಡೆಯಬೇಕೆಂದು ಹಾಗೂ ನಮ್ಮ‌ಲ್ಲಿ‌ ಇತಿಹಾಸ‌ದ ಪ್ರಜ್ಞೆ ಮೂಡಲು ಪ್ರಾಚ್ಯ: ತೌಳವ ಕರ್ಣಾಟದ‌ ಈ ಅಭಿಯಾನಕ್ಕೆ ಎಲ್ಲರೂ ಕೈ‌ ಜೋಡಿಸಬೇಕೆಂದು ಕ್ರೆಡಿಟ್ ಕೊ- ಆಪರೇಟಿವ್ ಬ್ಯಾಂಕ್-ಉಡುಪಿ ಇದರ ವ್ಯವಸ್ಥಾಪಕರಾದ ಉಮೇಶ್ ಆಚಾರ್ಯ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪುಷ್ಕರಣಿ ಸಂರಕ್ಷಣೆಯ ಜೊತೆಗೆ ಪರಿಸರ ಸಂರಕ್ಷಣೆಯೂ ಆಗಬೇಕೆಂದು ಹಾಗೂ ಪ್ರಾಚ್ಯ: ತೌಳವ ಕರ್ಣಾಟ ಇದರ ಉದ್ದೇಶ ಮತ್ತು ಮುಂದಿನ‌ ಯೋಜನೆಗಳ‌ ಬಗ್ಗೆ ಮಾಹಿತಿಯನ್ನು ಪ್ರೊ.‌ ಎಸ್.ಎ ಕೃಷ್ಣಯ್ಯ ಅವರು ವಿವರಿಸಿದರು.

ಮಾಣಿಬೆಟ್ಟು ಪರಿಸರದಲ್ಲಿರುವ ಈ ಪುಷ್ಕರಣಿಯು ಶಿರ್ವ ಗ್ರಾಮದಲ್ಲಿಯೇ ಪ್ರಾಚೀನವಾದುದಾಗಿದ್ದು, ಸುಮಾರು 14-15ನೆಯ ಶತಮಾನಕ್ಕೆ ಸೇರಿದೆ ಎಂದು ಅಧ್ಯಯನದಿಂದ ತಿಳಿದುಬಂದಿರುತ್ತದೆ. ಇಂತಹ ಪುಷ್ಕರಣಿಯು ಇಂದು ವಿನಾಶದಂಚಿನಲ್ಲಿದ್ದು ಈ ಪುಷ್ಕರಣಿಯ ರಕ್ಷಣಾ ಕಾರ್ಯವನ್ನು ಸ್ಥಳೀಯರ , ಇತಿಹಾಸ ಆಸಕ್ತರ, ಉತ್ಸಾಹಿ ವಿದ್ಯಾರ್ಥಿಗಳ, ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ನೆರವೇರಿಸಲಾಯಿತು. ಇಲ್ಲಿಯೇ 14ನೆ ಶತಮಾನದ ಅಪರಿಪೂರ್ಣ ಶಾಸನ ಕಲ್ಲಿ‌ನ ಸಂರಕ್ಷಣೆಯನ್ನು ಸಹ ಮಾಡಲಾಯಿತು. ಶ್ರಾವ್ಯಾ ಆರ್. ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!