Sunday, January 19, 2025
Sunday, January 19, 2025

ನೀರಿನಲ್ಲಿ ಜೀವಿಸುವ ಪಕ್ಷಿಗಳ ಅಂಚೆ ಚೀಟಿ ಪ್ರದರ್ಶನ

ನೀರಿನಲ್ಲಿ ಜೀವಿಸುವ ಪಕ್ಷಿಗಳ ಅಂಚೆ ಚೀಟಿ ಪ್ರದರ್ಶನ

Date:

ಬಾರಕೂರು, ಅ. 6: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ ‘ರಾಷ್ಟ್ರೀಯ ವನ್ಯ ಜೀವಿ ಸಪ್ತಾಹ’ ಅಕ್ಟೋಬರ್ 2 ರಿಂದ 8, 2024ರ ಸಂದರ್ಭದಲ್ಲಿ ವನ್ಯಜೀವಿಗಳ ಜಾಗೃತಿ ಮತ್ತು ಸಂರಕ್ಷಣೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಅಕ್ಟೋಬರ್ 4 ರಂದು ಆಯೋಜಿಸಲಾಯಿತು. ಈ ಕಾರ್ಯಕ್ರಮವು ಪಕ್ಷಿಗಳ ಬ್ರಹತ್ ಅಂಚೆಚೀಟಿ ಸಂಗ್ರಹಣೆಯಲ್ಲಿ ಗಿನ್ನೆಸ್ ದಾಖಲೆಯನ್ನು ಹೊಂದಿರುವ ಬ್ರಹ್ಮಾವರದ ಡೇನಿಯಲ್ ಮಂತೇರೋರವರ ನೇತೃತ್ವದಲ್ಲಿ ಪ್ರತೇಕ್ಷತೆಯ ಮೂಲಕ ನಡೆಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ರಾಧಾಕೃಷ್ಣ ನಾಯಕ್ ಅವರು ‘ವನ್ಯಜೀವಿ ಸಪ್ತಾಹ’ ಆಚರಣೆಯ ಹಿನ್ನೆಲೆ ಮತ್ತು ಅದರ ಅಗತ್ಯತೆಯನ್ನು ವಿವರಿಸಿದರು. ಡೇನಿಯಲ್ ಮಂತೇರೋ ಅವರು ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಸವಾಲುಗಳು ಮತ್ತು ನೀರಿನಲ್ಲಿ ಜೀವಿಸುವ ಪಕ್ಷಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾತನಾಡಿ, ಅವರಿಗೆ ಉತ್ತೇಜನ ನೀಡಿದರು.

229ನೇ ಅಂಚೆಚೀಟಿಯ ಪ್ರದರ್ಶನವನ್ನು ಆಯೋಜಿಸಿ, ನೀರಿನಲ್ಲಿ ಜೀವಿಸುವ ಸಾವಿರಾರು ಪಕ್ಷಿಗಳ ಕುರಿತು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಶೋಭಾ ಆರ್ ಅವರು ಪರಿಸರ ಸಮತೋಲನ ಮತ್ತು ವನ್ಯಜೀವಿಗಳ ಬಗ್ಗೆ ಶಿಕ್ಷಣದ ಪಾತ್ರವನ್ನು ಕುರಿತು ಮಾತನಾಡಿದರು. ವಿದ್ಯಾ ಪಿ ಮತ್ತು ಗಂಗಾಧರ್ ಡಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕರಾದ ರಕ್ಷಿತಾ ಸ್ವಾಗತಿಸಿ, ಚೈತ್ರ ಕಾರ್ಯಕ್ರಮ ನಿರೂಪಿಸಿದರು. ನೀರಿನಲ್ಲಿ ಜೀವಿಸುವ ಪಕ್ಷಿಗಳ ಅಂಚೆಚೀಟಿ ಪ್ರದರ್ಶನದಲ್ಲಿ ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!