ಕೋಟ, ಅ.6: ಹೂವಿನ ಕೋಲು ಕಲೆ ಮನೆ ಮನದಲ್ಲೂ ಸದಾಕಾಲ ಪಸರಿಸುತ್ತಾ ಇರಲಿ ಎಂದು ಯಕ್ಷಗುರು ದೇವದಾಸ್ ರಾವ್ ಕೂಡ್ಲಿ ಹೇಳಿದರು. ಯಶಸ್ವಿ ಕಲಾವೃಂದ ತೆಕ್ಕಟ್ಟೆ ಇವರು ಪ್ರತಿವರ್ಷ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡು ಬರುತ್ತಿರುವ ಹೂವಿನಕೋಲು ಪತ್ರಕರ್ತ ರವೀಂದ್ರ ಕೋಟ ಮನೆಯಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷಗಾನ ಕ್ಷೇತ್ರ ಕರಾವಳಿಯಲ್ಲಿ ತನ್ನದೆ ಆದ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಅದೇ ರೀತಿ ಹೂವಿನಕೋಲು ಸಹ ಕಲಾರಾಧನೆಯ ಪ್ರತಿರೂಪವಾಗಿ ಸದಾ ಕಾಲ ಉಳಿಯುವಂತಾಗಬೇಕು ಈ ದಿಸೆಯಲ್ಲಿ ಪ್ರತಿ ಮನೆಯಲ್ಲೂ ಇದರ ಕಲರವ ಮೇಳೈಸಬೇಕು ಎಂದರು. ಹೂವಿನಕೋಲು ತಂಡದ ಪರವಾಗಿ ದೇವದಾಸ್ ರಾವ್ ಕೂಡ್ಲಿ ಇವರನ್ನು ಗೌರವಿಸಲಾಯಿತು. ಹೂವಿನ ಕೋಲು ತಂಡದ ಪ್ರಮುಖರಾದ ಭಾಗವತ ಪ್ರಶಾಂತ್ ಪಡುಕರೆ, ಬಾಲ ಕಲಾವಿದರಾಗಿ ವಿಶ್ರುತ್, ಸಂಕೇತ್, ಪವನ್ ಆಚಾರ್, ಸವಿತಾ ರವೀಂದ್ರ ಕೋಟ ಮತ್ತಿತರರು ಇದ್ದರು.
ಹೂವಿನ ಕೋಲು ಕಲೆ ಮನೆ ಮನದಲ್ಲಿ ಪಸರಿಸಲಿ: ಯಕ್ಷಗುರು ದೇವದಾಸ್ ರಾವ್ ಕೂಡ್ಲಿ

ಹೂವಿನ ಕೋಲು ಕಲೆ ಮನೆ ಮನದಲ್ಲಿ ಪಸರಿಸಲಿ: ಯಕ್ಷಗುರು ದೇವದಾಸ್ ರಾವ್ ಕೂಡ್ಲಿ
Date: