ಬೆಳ್ಮಣ್: ಪ್ರತಿಯೊಂದು ಸಾಧನೆಯ ಆರಂಭ ಒಂದು ಕನಸಿನಿಂದ ಹುಟ್ಟಿಕೊಳ್ಳುತ್ತದೆ. ಅಂತಹ ನೂರಾರು ಕನಸನ್ನು ಹೊತ್ತಂತಹ ನಮ್ಮ ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಅವರ ಪ್ರತಿಭೆಗೆ ಸೂಕ್ತ ವೇದಿಕೆ ನಿರ್ಮಿಸಲು ನಮ್ಮ ಸಂಸ್ಥೆಯೂ ಯೋಜನೆಯನ್ನು ರೂಪಿಸುತ್ತಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷ ಇನ್ನ ವಿಠಲ ಮೂಲ್ಯ ಹೇಳಿದರು.
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಜರಗಿದ ೨೨ನೇ ವರ್ಷದ ವರ್ಷಾಚರಣೆಯ ಪ್ರಯುಕ್ತ ಜರಗಿದ “ಆರಂಭ” ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಸ್ಥೆಯೂ ಒಂದು ಕೇವಲ ಸಂಸ್ಥೆಯಾಗಿರದೇ ಸದಸ್ಯರೆಲ್ಲರಲ್ಲಿ ಭಾವನಾತ್ಮಕ ಕೌಟುಂಬಿಕ ಸಂಬಂಧ ನಿರ್ಮಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟಪೂವಾಧ್ಯಕ್ಷ ಬೋಳ ಉದಯ ಅಂಚನ್, ಪೂರ್ವಾಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಅಂತರಿಕ ಲೆಕ್ಕಪರಿಶೋಧಕ ಅಬ್ಬನಡ್ಕ ಹರಿಪ್ರಸಾದ್ ಆಚಾರ್ಯ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಹರಿಣಾಕ್ಷಿ ಪೂಜಾರಿ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ, ಸದಸ್ಯರಾದ ಹರೀಶ್ ಪೂಜಾರಿ, ಆರತಿ ಕುಮಾರಿ, ಹರಿಣಿ ಪೂಜಾರಿ, ಪದ್ಮಶ್ರೀ ಪೂಜಾರಿ, ಅಶ್ವಿನಿ ಪೂಜಾರಿ, ಕೀರ್ತನ್ ಪೂಜಾರಿ, ಸುದರ್ಶನ್ ಸಾಲ್ಯಾನ್ ಮೊದಲಾದವರಿದ್ದರು. ಕೋಶಾಧಿಕಾರಿ ವೀಣಾ ಪೂಜಾರಿ ವರದಿ ಮಂಡಿಸಿದರು.
ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್ ವಂದಿಸಿದರು. ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ಕಾರ್ಯಕ್ರಮ ನಿರೂಪಿಸಿದರು.