Saturday, November 23, 2024
Saturday, November 23, 2024

ರೇಬಿಸ್ ನಿರ್ಮೂಲನೆ ಸಾಧ್ಯ: ಮುಖ್ಯ ಪಶು ವೈದ್ಯಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ

ರೇಬಿಸ್ ನಿರ್ಮೂಲನೆ ಸಾಧ್ಯ: ಮುಖ್ಯ ಪಶು ವೈದ್ಯಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ

Date:

ಉಪ್ಪೂರು, ಸೆ.30: ಗ್ರಾಮ ಪಂಚಾಯತ್ ಉಪ್ಪೂರು, ಪಶು ಆಸ್ಪತ್ರೆ ಬ್ರಹ್ಮಾವರ, ಪ್ರಾಥಮಿಕ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರ ಕೊಳಲಗಿರಿ, ವಿಚಾರ ವೇದಿಕೆ ಕೊಳಲಗಿರಿ, ಯುವಜನ ಮಂಡಲ ಉಪ್ಪೂರು, ಜನತಾ ವ್ಯಾಯಮ ಶಾಲೆ ಜಾತಾಬೆಟ್ಟು, ಗೆಳೆಯರ ಬಳಗ ಲಕ್ಷ್ಮಿನಗರ, ಸವಿನಯ ಪ್ರೆಂಡ್ಸ್ ಕ್ಲಬ್ ನರ್ನಾಡು, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘ, ವಿಶ್ವಾಸ್ ಪ್ರೆಂಡ್ಸ್ ಸಾಲ್ಮರ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಉಪ್ಪೂರು ಗ್ರಾಮದಲ್ಲಿ ನಡೆದ “ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ” ವನ್ನು ಬ್ರಹ್ಮಾವರ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಯಾದ ಡಾ. ಉದಯ್ ಕುಮಾರ್ ಶೆಟ್ಟಿ ಉದ್ಘಾಟಿಸಿ ರೇಬಿಸ್ ಖಾಯಿಲೆಯ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದರು.
ರೇಬಿಸ್ ಮಾರಣಾಂತಿಕ ಖಾಯಿಲೆ, ವ್ಯವಸ್ಥಿತ ಹಾಗೂ ಸಂಘಟಿತ ಕಾರ್ಯಕ್ರಮದ ಮೂಲಕ ನಿರ್ಮೂಲನೆ ಸಾಧ್ಯ ಎಂದರು.

ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪ್ಪೂರು ಗ್ರಾಮ ಪಂಚಾಯತ್ ಲೆಕ್ಕ ಸಹಾಯಕರಾದ ಉದಯ್, ಸಿಬ್ಬಂದಿ ವರ್ಗದವರು, ಯುವ ವಿಚಾರ ವೇದಿಕೆ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಯುವಜನ ಮಂಡಲದ ಅಧ್ಯಕ್ಷರಾದ ಜಯಕರ್ ಉಪ್ಪೂರು, ಜನತಾ ವ್ಯಾಯಮ ಶಾಲೆ ಅಧ್ಯಕ್ಷರಾದ ಅರುಣ್ ಕರ್ಕೇರ, ಗೆಳೆಯರ ಬಳಗದ ಸುಕೇಶ್, ಸವಿನಯ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಸುಕೇಶ್, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಭಾಸ್ಕರ್ ಡಿ. ಶೆಟ್ಟಿ ಅಮ್ಮುಂಜೆ, ವಿಶ್ವಾಸ್ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಪ್ರಭಾಕರ್ ಆಚಾರ್ಯ, ಕೊಳಲಗಿರಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರಾದ ಉದಯ್ ಗಾಣಿಗ, ಕಿರಿಯ ಪಶು ಪರಿವೀಕ್ಷಕರಾದ ಅಭಿಷೇಕ್ , ಪಶು ವೈದ್ಯಕೀಯ ಪರಿವೀಕ್ಷಕರಾದ ಜೇನುಕಲ್ ಸಿದ್ದೇಶ್, ಪಶು ಸಖಿಯಾರಾದ ಮಂಜುಳಾ, ನಳಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾಮದ 9 ಕೇಂದ್ರಗಳಲ್ಲಿ ವಿವಿಧ ಸಮಯದಲ್ಲಿ ಬೆಳಿಗ್ಗೆ 9 ರಿಂದ 12.30 ರ ವರೆಗೆ ಸಂಯೋಜಿತ ಸಂಘಟನೆಯ ಸಹಕಾರದ ಮೂಲಕ ಸುಮಾರು 300 ಸಾಕುನಾಯಿಗಳಿಗೆ ಉಚಿತವಾಗಿ ರೇಬಿಸ್ ರೋಗ ನಿರೋಧಕ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಯಿತು. ದಿನೇಶ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದ ಸುಬ್ರಹ್ಮಣ್ಯ ಆಚಾರ್ಯ ವಂದಿಸಿದರು. ಯುವ ವಿಚಾರ ವೇದಿಕೆಯ ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಧಾನಮಂತ್ರಿ ಫಸಲ್ ಬಿಮಾ ಹಿಂಗಾರು ಮತ್ತು ಬೇಸಿಗೆ ಹಂಗಾಮು ಯೋಜನೆ

ಉಡುಪಿ, ನ.22: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಗ್ರಾಮ...

ಜಿಲ್ಲೆಯಲ್ಲಿ ಕೆ.ಎಫ್.ಡಿ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

ಉಡುಪಿ, ನ.22: ಕ್ಯಾಸನೂರು ಅರಣ್ಯ ರೋಗವು ಅಥವಾ ಮಂಗನ ಜ್ವರ ಕಾಯಿಲೆಯು...

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...
error: Content is protected !!