Saturday, September 28, 2024
Saturday, September 28, 2024

ಸಾಹಿತ್ಯದ ಓದಿನಿಂದ ವಿಕಸನ: ರಾಜೇಂದ್ರ ಭಟ್ ಕೆ

ಸಾಹಿತ್ಯದ ಓದಿನಿಂದ ವಿಕಸನ: ರಾಜೇಂದ್ರ ಭಟ್ ಕೆ

Date:

ಕಾರ್ಕಳ, ಸೆ.28: ಸಾಹಿತ್ಯದ ಓದಿನಿಂದ ನಮ್ಮ ಭಾಷೆ ಶುದ್ಧವಾಗುವುದರಿಂದ ಸಂವಹನ ಸುಲಭವಾಗುತ್ತದೆ. ಅಕಾಡೆಮಿಕ್ ಕಲಿಕೆಯು ವೇಗ ಪಡೆಯುತ್ತದೆ. ಮೌಲ್ಯಗಳು ಅಂತರ್ಗತ ಆಗುತ್ತವೆ ಮತ್ತು ವ್ಯಕ್ತಿತ್ವದ ವಿಕಸನವೂ ಖಾತರಿ ಆಗುತ್ತದೆ. ಅದರಿಂದ ವಿದ್ಯಾರ್ಥಿಗಳು ತುಂಬಾ ಓದುವುದು ಮತ್ತು ಬರೆಯುವುದು ಅಗತ್ಯ ಎಂದು ಶಿಕ್ಷಕರೂ, ವಿಕಸನದ ರಾಷ್ಟ್ರಮಟ್ಟದ ತರಬೇತುದಾರರೂ ಆದ ರಾಜೇಂದ್ರ ಭಟ್ ಕೆ ಅವರು ಅಭಿಪ್ರಾಯಪಟ್ಟರು. ಅವರು ಕಾರ್ಕಳದ ಎಸ್ ವಿ ಟಿ ಮಹಿಳಾ ಪದವಿ ಕಾಲೇಜಿನ ಸಾಹಿತ್ಯ ಸಂಘವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಮುಂದೆ ಅವರು ವಿದ್ಯಾರ್ಥಿನಿಯರ ಜೊತೆಗೆ ‘ಸಾಹಿತ್ಯದ ವಿವಿಧ ಆಯಾಮಗಳು’ ಎಂಬ ವಿಷಯದ ಮೇಲೆ ಸಂವಾದ ಮಾಡಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ ಉಷಾ ನಾಯಕ್ ಅವರು ಅಧ್ಯಕ್ಷತೆ ವಹಿಸಿ ಬದುಕಿಗೆ ಅರ್ಥ ನೀಡುವ ಸಾಹಿತ್ಯದ ಓದು ಇಂದಿನ ಅಗತ್ಯ ಎಂದು ಹೇಳಿದರು.

ಸಾಹಿತ್ಯ ಸಂಘದ ನಿರ್ದೇಶಕಿ ವಿನುತ ಕಾಮತ್ ಅವರು ಅತಿಥಿಗಳನ್ನು ಪರಿಚಯ ಮಾಡಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿ ನಾಯಕರಾದ ಶ್ರೇಯಾ ಮತ್ತು ರಕ್ಷಾ ವೇದಿಕೆಯಲ್ಲಿದ್ದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಾಸ್ಕೆಟ್ ಬಾಲ್: ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಗಣಿತನಗರ, ಸೆ.28: ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ...

ಗುರುಪ್ರಸಾದ್ ಎ. ರವರಿಗೆ ಬೀಳ್ಕೊಡುಗೆ

ಮಣಿಪಾಲ, ಸೆ.28: ಸುಮಾರು 34 ವರ್ಷಗಳಿಂದ, ಮಣಿಪಾಲ ತಾಂತ್ರಿಕ ವಿದ್ಯಾಲಯದ ಇಲೆಕ್ಟ್ರಿಕಲ್...

ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಕಾಪು, ಸೆ.28: ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ ದಯಾಳ್...

ನಾನೇ ಅಡ್ಜಸ್ಟ್ ಮಾಡಿಕೊಳ್ಳುವುದು

ಸಂಜೆ ಡ್ಯೂಟಿ ಮುಗಿಸಿ ಮನೆಗೆ ಬಂದ ಹೆಂಡತಿ "ನಾನೇ ಎಲ್ಲ ಕೆಲಸ...
error: Content is protected !!