Sunday, February 23, 2025
Sunday, February 23, 2025

‘ದಸರಾ ದರ್ಶನಿ-2024’ ವಿಶೇಷ ಪ್ಯಾಕೇಜ್; ಉಡುಪಿ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಸುವರ್ಣಾವಕಾಶ

‘ದಸರಾ ದರ್ಶನಿ-2024’ ವಿಶೇಷ ಪ್ಯಾಕೇಜ್; ಉಡುಪಿ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಸುವರ್ಣಾವಕಾಶ

Date:

ಉಡುಪಿ, ಸೆ.27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಘಟಕದದಿಂದ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ ‘ದಸರಾ ದರ್ಶನಿ-2024’ ಎಂಬ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ ಕಾರ್ಯಾಚರಿಸಲಾಗುತ್ತಿದೆ. ಪ್ಯಾಕೇಜ್ 1. ಪಂಚದುರ್ಗ ದರ್ಶನ: ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 7.30 ಬಸ್ ಹೊರಟು, ಸೌಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಾಸ್ಥಾನಕ್ಕೆ ಬೆಳಗ್ಗೆ 09 ಕ್ಕೆ ತಲುಪಿ, 9.15 ಕ್ಕೆ ಹೊರಟು, ಕೊಲ್ಲೂರು ಮೂಕಾಂಬಿಕ ದೇವಾಸ್ಥಾನಕ್ಕೆ ಬೆಳಗ್ಗೆ 10.30 ಕ್ಕೆ ತಲುಪಿ, 11.00 ಕ್ಕೆ ಹೊರಟು, ನಂತರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಬೆಳಗ್ಗೆ 11.30 ಕ್ಕೆ ತಲುಪಿ, ಮಧ್ಯಾಹ್ನ 12 ಕ್ಕೆ ಹೊರಟು, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನ 1.30 ಕ್ಕೆ ತಲುಪಿ, ಮಧ್ಯಾಹ್ನ ಊಟದ ನಂತರ, ಮಧ್ಯಾಹ್ನ 3 ಕ್ಕೆ ಹೊರಟು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಜೆ 4.30 ಕ್ಕೆ ತಲುಪಿ, ಸಂಜೆ 4.45 ಕ್ಕೆ ಹೊರಟು, ನೀಲಾವರ ಶ್ರೀ ಮಹಿಷ ಮರ್ದಿನಿ ದೇವಸ್ಥಾನಕ್ಕೆ ಬಸ್ ಸಂಜೆ 5.15 ಕ್ಕೆ ತಲುಪಿ, ಸಂಜೆ 5.30 ಕ್ಕೆ ಹೊರಟು, ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸಂಜೆ 6.15 ಹಾಗೂ ಉಡುಪಿ ಘಟಕ್ಕೆ ಸಂಜೆ 6.30 ಗಂಟೆಗೆ ಬಸ್ ತಲುಪಲಿದೆ. ಒಟ್ಟು 223 ಕಿ.ಮೀ ಇದ್ದು, ಪ್ರಪೋಸಲ್ ದರ ವಯಸ್ಕರಿಗೆ 400 ರೂ ಹಾಗೂ ಮಕ್ಕಳಿಗೆ 350 ರೂ ನಿಗಧಿಪಡಿಸಲಾಗಿದೆ.

ಪ್ಯಾಕೇಜ್ 2. ಕ್ಷೇತ್ರ ದರ್ಶನ : ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 8.30 ಕ್ಕೆ ಬಸ್ ಹೊರಟು, ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬೆಳಗ್ಗೆ 8.45 ಕ್ಕೆ ತಲುಪಿ, ಬೆಳಗ್ಗೆ 9.25 ಕ್ಕೆ ಹೊರಟು, ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 9.45 ಕ್ಕೆ ತಲುಪಿ, ಬೆಳಗ್ಗೆ 10.15 ಕ್ಕೆ ಹೊರಟು, ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 10.25 ಕ್ಕೆ ತಲುಪಿ, ಬೆಳಗ್ಗೆ 10.45 ಕ್ಕೆ ಹೊರಟು, ಮರವಂತೆಗೆ ಬೆಳಗ್ಗೆ 11.15 ಕ್ಕೆ ತಲುಪಿ, ಬೆಳಗ್ಗೆ 11.45 ಕ್ಕೆ ಅಲ್ಲಿಂದ ಹೊರಟು, ಮುಡೇಶ್ವರ ವನ್ನು ಮಧ್ಯಾಹ್ನ 1 ಗಂಟೆಗೆ ತಲುಪಿ, ಮಧ್ಯಾಹ್ನದ ಊಟದ ನಂತರ 2.30 ಕ್ಕೆ ಬಸ್ ಹೊರಟು, ಇಡಗುಂಜಿಗೆ ಮಧ್ಯಾಹ್ನ 3 ಕ್ಕೆ ತಲುಪಿ, ಮಧ್ಯಾಹ್ನ 3.30 ಕ್ಕೆ ಹೊರಟು, ಅಪ್ಸರಕೊಂಡಕ್ಕೆ ಬಸ್ ಸಂಜೆ 3.50 ಕ್ಕೆ ತಲುಪಿ, ಅಲ್ಲಿಂದ ಸಂಜೆ 4.30 ಕ್ಕೆ ಹೊರಟು, ಕಾಸರಕೋಡ್ ಇಕೋಬೀಚ್‌ಗೆ ಸಂಜೆ 4.45 ಕ್ಕೆ ತಲುಪಿ, ಅಲ್ಲಿಂದ ಸಂಜೆ 5.45 ಕ್ಕೆ ಹೊರಟು, ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಬಸ್ ತಲುಪುವ ರಾತ್ರಿ 8.30 ಹಾಗೂ ಉಡುಪಿ ಘಟಕಕ್ಕೆ ರಾತ್ರಿ 8.45 ಕ್ಕೆ ಬಸ್ ತಲುಪಲಿದೆ. ಒಟ್ಟು 281 ಕಿ.ಮೀ ಗೆ ಪ್ರಪೋಸಲ್ ದರ ವಯಸ್ಕರಿಗೆ 500 ರೂ ಹಾಗೂ ಮಕ್ಕಳಿಗೆ 400 ರೂ. ನಿಗಧಿಪಡಿಸಿದ್ದು, ಆನ್ಲೈನ್ ಬುಕ್ಕಿಂಗ್‌ಗಾಗಿ http://www.ksrtc.in ಮತ್ತು ಮುಂಗಡ ಬುಕ್ಕಿಂಗ್‌ಗಾಗಿ ಡಾ.ವಿ.ಎಸ್ ಆಚಾರ್ಯ ಬಸ್ ನಿಲ್ದಾಣ, ಉಡುಪಿ ಮೊ.ನಂ: 9663266400 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕ.ರಾ.ರ.ಸಾ.ನಿಗಮದ ಉಡುಪಿ ಘಟಕ ವ್ಯವಸ್ಥಾಪಕರ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!