Monday, February 24, 2025
Monday, February 24, 2025

ಅಂಬಾಗಿಲು-ಗುಂಡಿಬೈಲು ಮಾರ್ಗ ಬಳಸುವಂತೆ ಮನವಿ

ಅಂಬಾಗಿಲು-ಗುಂಡಿಬೈಲು ಮಾರ್ಗ ಬಳಸುವಂತೆ ಮನವಿ

Date:

ಉಡುಪಿ, ಸೆ.19: ಅಂಬಾಗಿಲು ಗುಂಡಿಬೈಲ್ ನಿಂದ ಉಡುಪಿಗೆ ಹೋಗುವ ಪರವಾನಿಗೆ ಇದ್ದರೂ, ಈ ಮಾರ್ಗದಲ್ಲಿ ಹೋಗದ ಬಸ್ಸುಗಳನ್ನು ತಡೆದು ಗುಂಡಿಬೈಲು ಮಾರ್ಗ ಬಳಸುವಂತೆ ಮನವಿ ಮಾಡಲಾಯಿತು. ಬಸ್ಸುಗಳು ಅಂಬಾಗಿಲು ನಿಟ್ಟೂರು ಬನ್ನಂಜೆಯಿಂದ ಉಡುಪಿಗೆ ಹಾದು ಹೋಗುತ್ತಿದ್ದವು, ಆದ್ದರಿಂದ ಅಂಬಾಗಿಲು ಗುಂಡಿಬೈಲಿನ ಜನರಿಗೆ 15 ವರ್ಷಗಳಿಂದ ಬಸ್ಸಿನ ಸಮಸ್ಯೆ ಕಾಡುತ್ತಿತ್ತು ಹಾಗಾಗಿ ಬುಧವಾರ ಬೆಳಿಗ್ಗೆ ಬಸ್ಸುಗಳನ್ನು ಅಂಬಾಗಿಲು ಜಂಕ್ಷನ್ ನಲ್ಲಿ ನಿಲ್ಲಿಸಿ ಬಸ್ಸುಗಳಿಗೆ ನಾಮಫಲಕ ಅಳವಡಿಸಿ ಬಸ್ ಸಿಬ್ಬಂದಿಯೊಂದಿಗೆ ಇನ್ನು ಮುಂದೆ ಗುಂಡಿಬೈಲು ಕಲ್ಸಂಕದಿಂದ ಉಡುಪಿಗೆ ಹಾದು ಹೋಗಬೇಕಾಗಿ ವಿನಂತಿಸಿಕೊಳ್ಳಲಾಯಿತು.

ಆರ್ ಟಿ ಓ ಅಧಿಕಾರಿಗಳು, ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಕಕ್ಕುಂಜೆ ವಾರ್ಡಿನ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಕರಂಬಳ್ಳಿ ವಾರ್ಡ್ ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!