ಉಡುಪಿ, ಸೆ.18: ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅನಂತವ್ರತ ಕಾರ್ಯಕ್ರಮ ದೇವಾಲಯದ ತಂತ್ರಿಗಳಾದ ಹಯವದನ ತಂತ್ರಿ, ವಾದಿರಾಜ ತಂತ್ರಿ, ಪ್ರಧಾನ ಅರ್ಚಕ ರಾಘವೇಂದ್ರ ಭಟ್, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಅನಂತ ವಿಪ್ರ ಬಳಗದವರ ಸಹಕಾರದಿಂದ ವೈಭವದಿಂದ ಜರುಗಿತು. ವಿಶೇಷವಾಗಿ ಅನಂತ ಕದಳಿ ಸಮರ್ಪಣೆ ಸೇವೆ ಭಕ್ತಾದಿಗಳವರಿಂದ ನಡೆಯಿತು. ಕದಿರು ಕಟ್ಟುವುದು, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಕಲ್ಪೋಕ್ತ ಕಲಶ ಪೂಜೆ, ವಿಷ್ಣು ಸಹಸ್ರನಾಮ ಪಾರಾಯಣ, ಲಕ್ಷ್ಮೀ ಶೋಭಾನೆ, ಮಹಾಪೂಜೆ, ವ್ರತಧಾರಿಗಳ ಕೈಗೆ ಅನಂತ ಸೂತ್ರದಾರ ಕಟ್ಟುವ ಪ್ರಕ್ರಿಯೆ, ಅನ್ನಸಂತರ್ಪಣೆ, ವಿಶೇಷ ಭಜನೆ, ಹೂವಿನ ಪೂಜೆ, ರಂಗಪೂಜೆ, ಅಷ್ಠಾವಧಾನ ಸೇವೆ ನಡೆಯಿತು. ಭಕ್ತರು ಬೆಳಿಗ್ಗೆನಿಂದ ರಾತ್ರಿಯವರೆಗೆ ಶ್ರೀ ಕ್ಷೇತ್ರ ಸ್ವಾಮಿಯ ದರ್ಶನ ಪಡೆದು ವಿಶೇಷ ಕದಳಿ ಪ್ರಸಾದ
ಸ್ವೀಕರಿಸಿದರು.
ಪಣಿಯಾಡಿ: ಅನಂತವ್ರತ; ಕದಳಿ ಪೂಜೆ

ಪಣಿಯಾಡಿ: ಅನಂತವ್ರತ; ಕದಳಿ ಪೂಜೆ
Date: