ಉಡುಪಿ, ಸೆ.16: ರೋಟರಿ ಉಡುಪಿ ಪ್ರಾಯೋಜಿತ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ಉಡುಪಿ ಇಲ್ಲಿಯ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ನಡೆಯಿತು. ರೋಟರಿ ಉಡುಪಿಯ ಮಾಜಿ ಅಸಿಸ್ಡೆಂಟ್ ಗವರ್ನರ್ ರಾಮಚಂದ್ರ ಉಪಾಧ್ಯಾಯ ಇಂಟರಾಕ್ಟ್ ಅಧ್ಯಕ್ಷ ಯಶಸ್ ಅವರಿಗೆ ಪದಪ್ರದಾನ ನೆರೆವೆರಿಸಿ ಹೊಸತಂಡಕ್ಕೆ ಶುಭ ಹಾರೈಸಿದರು. ಇಂಟರಾಕ್ಟ್ ಅಧ್ಯಕ್ಷ ಯಶಸ್ ತಮ್ಮ ತಂಡದ ಪರಿಚಯ ಮಾಡಿದರು. ಸಂಪನ್ಮೂಲ ಅತಿಥಿ ಮಣಿಪಾಲ ಕಾಲೇಜಿನ ಫಾರೆನ್ಸಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಶ್ವಿನಿ ಕುಮಾರ್ ಅವರು ಹಾಸ್ಟೆಲ್ಲ್ ಜೀವನದ ಯಶಸ್ವಿ ನಿರ್ವಹಣೆ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲ ವಿನ್ಸಟ್ ಡಿ’ಕೊಷ್ಟಾ, ಶಿಕ್ಷಕ ಸಂಯೋಜಕಿ ವೀಣಾ, ರೋಟರಿ ಉಡುಪಿಯ ಸುಬ್ರಹ್ಮಣ್ಯ ಕಾರಂತ, ಇಂಟರಾಕ್ಟ್ ಸಭಾಪತಿ ಸಾಧನಾ ಮುಂಡ್ಕೂರ್, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾರದಾ ರೆಸಿಡೆನ್ಸಿಯಲ್ ಶಾಲೆ: ಇಂಟರಾಕ್ಟ್ ಪದಗ್ರಹಣ

ಶಾರದಾ ರೆಸಿಡೆನ್ಸಿಯಲ್ ಶಾಲೆ: ಇಂಟರಾಕ್ಟ್ ಪದಗ್ರಹಣ
Date: