ಉಡುಪಿ, ಸೆ.13: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಕಾಪು ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಹೆಜಮಾಡಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸೆಪ್ಟಂಬರ್ 22 ರಂದು ನಡೆಯಲಿದೆ.
ಸ್ಪರ್ಧೆಗಳ ವಿವಿರ: ಪುರುಷರಿಗೆ: ಅಥ್ಲೆಟಿಕ್ಸ್( 100ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡೆಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್, 4*100 ಮೀ ರಿಲೇ, 4*400 ಮೀ ರಿಲೇ.), ಗುಂಪು ಆಟಗಳಾದ ವಾಲಿಬಾಲ್, ಖೋ-ಖೋ, ಕಬಡ್ಡಿ, ಫುಟ್‌ಬಾಲ್ ಹಾಗೂ ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ.
ಮಹಿಳೆಯರಿಗೆ: ಅಥ್ಲೆಟಿಕ್ಸ್ ( 100ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡೆಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ ಹರ್ಡಲ್ಸ್, 4*100 ಮೀ ರಿಲೇ, 4*400 ಮೀ ರಿಲೇ.), ಗುಂಪು ಆಟಗಳಾದ ವಾಲಿಬಾಲ್, ಖೋ-ಖೋ, ಕಬಡ್ಡಿ ಹಾಗೂ ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ.
ಭಾಗವಹಿಸುವ ಸ್ಪರ್ಧಿಗಳು ಸ್ಪರ್ಧೆ ನಡೆಯುವ ದಿನದಂದು ಬೆಳಗ್ಗೆ 9 ಗಂಟೆಯ ಒಳಗಾಗಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು. ಹೆಸರು ಹಾಗೂ ತಂಡವನ್ನು ನೋಂದಾಯಿಸಲು ಸೆಪ್ಟಂಬರ್ 19 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ, ರಾಜೀವ್ ಗಾಂಧಿ ಕ್ರೀಡಾಂಗಣ ಹೆಜಮಾಡಿ ಕಾಪು ಮೊ.ನಂ: 9448770165 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.