Saturday, January 18, 2025
Saturday, January 18, 2025

ಆಸ್ಕರ್ ಫೆರ್ನಾಂಡಿಸ್ ಪುಣ್ಯತಿಥಿ ಆಚರಣೆ

ಆಸ್ಕರ್ ಫೆರ್ನಾಂಡಿಸ್ ಪುಣ್ಯತಿಥಿ ಆಚರಣೆ

Date:

ಉಡುಪಿ, ಸೆ.13: ಕಾಂಗ್ರೆಸ್ ಪಕ್ಷದ ಮುಖಂಡ ದಿ.ಆಸ್ಕರ್ ಫೆರ್ನಾಂಡೀಸ್ ಅವರ ಮೂರನೇ ಪುಣ್ಯತಿಥಿ ಆಚರಣೆಯನ್ನು ಕಾಂಗ್ರೆಸ್ ಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಚರಿಸಲಾಯಿತು. ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪ್ರಸ್ತಾವಿಕವಾಗಿ ಮಾತನಾಡುತ್ತಾ, ನಿರಂತರವಾಗಿ ತನ್ನ ಜೀವವನ್ನು ಜನತಾ ಸೇವೆಗೆ ಮುಡಿಪಾಗಿಟ್ಟವರು ಆಸ್ಕರ್ ಫೆರ್ನಾಂಡೀಸ್ ರವರು. ಉಡುಪಿಯ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಕಾಂಗ್ರೆಸ್ ಪಕ್ಷವನ್ನು ಉಡುಪಿಯಲ್ಲಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಆಸ್ಕರ್ ಫೆರ್ನಾಂಡೀಸ್ ರವರ ಒಡನಾಡಿ ರೆ.ಫಾದರ್ ವಿಲಿಯಂ ಮಾರ್ಟೀಸ್ ರವರು ಆಸ್ಕರ್ ರವರ ಗುಣಗಾನ ಮಾಡಿ ಸರಳ ವ್ಯಕ್ತಿತ್ವದ ಜನನಾಯಕ ಆಸ್ಕರ್ ಅವರ ಸೇವೆಯನ್ನು ಮರೆಯಲು ಅಸಾಧ್ಯ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದವರು ಎಂದು ಹೇಳಿ ಅವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಸಹಕಾರಿ ಕಾಂಗ್ರೆಸ್ ಅಧ್ಯಕ್ಷರಾದ ಅಣ್ಣಯ್ಯ ಸೇರಿಗಾರ್ ವಂದಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಎಮ್.ಎ ಗಪೂರ್, ಬಿ. ನರಸಿಂಹಮೂರ್ತಿ, ವೆರೋನಿಕಾ ಕರ್ನೆಲಿಯೋ, ಮಹಾಬಲ ಕುಂದರ್, ಭಾಸ್ಕರ್ ರಾವ್ ಕಿದಿಯೂರು, ಬಿ. ಕುಶಲ್ ಶೆಟ್ಟಿ, ಕೇಶವ ಕೋಟ್ಯಾನ್, ಜ್ಯೋತಿ ಹೆಬ್ಬಾರ್, ಉದ್ಯಾವರ ನಾಗೇಶ್ ಕುಮಾರ್, ರೆನಾಲ್ಡ್ ಪ್ರವೀಣ್ ಕುಮಾರ್, ಪ್ರಶಾಂತ್ ಜತ್ತನ್ನ, ಶಶಿಧರ್ ಶೆಟ್ಟಿ ಉಲ್ಲೂರು, ಜಯಕುಮಾರ್, ಯುವರಾಜ್, ಆನಂದ್ ಪೂಜಾರಿ, ರಮಾನಂದ ಪೈ, ಉಪೇಂದ್ರ ಗಾಣಿಗ, ಲಕ್ಷ್ಮೀಶ ಶೆಟ್ಟಿ, ಶ್ರೀಧರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!