ಕೋಟ, ಸೆ.12: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಉಡುಪಿ ಜಿಲ್ಲಾಡಳಿತ, ಕೋಟ ಗ್ರಾಮ ಪಂಚಾಯತ್, ಎಸ್ ಎಲ್ ಆರ್ ಎಂ.ಘಟಕ ಕೋಟ ಇವರುಗಳ ಸಂಯುಕ್ತ ಸಹಭಾಗಿತ್ವದಡಿ ಸ್ವಚ್ಚತಾ ಅಭಿಯಾನ ಹಾಗೂ ಗಿಡ ನಡುವ ಕಾರ್ಯಕ್ರಮಗಳನ್ನು ಸೆ.15ರ ಪೂರ್ವಾಹ್ನ 7ಕ್ಕೆ ಕೋಟ ಗ್ರಾ.ಪಂ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದೆ. ಇದಾದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾಡಳಿತ ನಿರ್ದೇಶನದಂತೆ ಮಾನವ ಸರಪಳಿಯಲ್ಲಿ ಕೈಜೋಡಿಸಲಿದೆ ಎಂದು ಸಂಘದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಅಜಿತ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪ್ರಜಾಪ್ರಭುತ್ವ ದಿನ- ಕೋಟ ಪಂಚವರ್ಣದಿಂದ ವಿನೂತ ಕಾರ್ಯಕ್ರಮ

ಪ್ರಜಾಪ್ರಭುತ್ವ ದಿನ- ಕೋಟ ಪಂಚವರ್ಣದಿಂದ ವಿನೂತ ಕಾರ್ಯಕ್ರಮ
Date: