Thursday, October 24, 2024
Thursday, October 24, 2024

ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ವಿವರ

ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ವಿವರ

Date:

ಉಡುಪಿ, ಸೆ.4: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಯಲ್ಲಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ.

ಪ್ರೌಢಶಾಲಾ ವಿಭಾಗ: ಕಾರ್ಕಳ ವಲಯದಲ್ಲಿ ಶಿವಪುರ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಕಮಲ್ ಅಹ್ಮದ್, ಬೈಂದೂರು ವಲಯದಲ್ಲಿ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ)ದ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಶೆಟ್ಟಿ, ಬ್ರಹ್ಮಾವರ ವಲಯದಲ್ಲಿ ಕೋಡಿಕನ್ಯಾನ ಸೋಮಬಂಗೇರ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಜ್ಯೋತಿ ಕೃಷ್ಣ ಪೂಜಾರಿ, ಉಡುಪಿ ವಲಯದಲ್ಲಿ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ)ದ ಸಹ ಶಿಕ್ಷಕಿ ಮಾಲತಿ ವಕ್ವಾಡಿ ಹಾಗೂ ಕುಂದಾಪುರ ವಲಯದ ಬಿದ್ಕಲ್‌ಕಟ್ಟೆ ಕೆ.ಪಿ.ಎಸ್ ನ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ.

ಹಿರಿಯ ಪ್ರಾಥಮಿಕ ವಿಭಾಗ: ಬ್ರಹ್ಮಾವರ ವಲಯದಲ್ಲಿ ಕೊಕ್ಕರ್ಣೆ ಕೆ.ಪಿ.ಎಸ್ ನ ಸಹ ಶಿಕ್ಷಕ ಭಾಸ್ಕರ ಪೂಜಾರಿ, ಉಡುಪಿ ವಲಯದಲ್ಲಿ ಸಾಂತೂರುಕೊಪ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್, ಕಾರ್ಕಳ ವಲಯದ ಕೈರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೆಟ್ಟಿ ಶಶಿಕಲಾ ನಾರಾಯಣ, ಬೈಂದೂರು ವಲಯದಲ್ಲಿ ಹೆರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಯಾನಂದ ಪಟಗಾರ ಹಾಗೂ ಕುಂದಾಪುರ ವಲಯದಲ್ಲಿ ಹಂಗಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿ.

ಕಿರಿಯ ಪ್ರಾಥಮಿಕ ವಿಭಾಗ: ಕಾರ್ಕಳ ವಲಯದಲ್ಲಿ ಕುಚ್ಚೂರು-2 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಾಲಿನಿ, ಉಡುಪಿ ವಲಯದಲ್ಲಿ ಮಲ್ಲಾರು ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಖಾತುನ್ ಬಿ, ಬ್ರಹ್ಮಾವರ ವಲಯದಲ್ಲಿ ಹೈಕಾಡಿ ಸರಕಾರಿ ಹಿ.ಪ್ರಾ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರವಿರಾಜ ಶೆಟ್ಟಿ, ಕುಂದಾಪುರ ವಲಯದಲ್ಲಿ ಗೋಪಾಡಿ ಪಡು ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ವಲಯದಲ್ಲಿ ಬಾರಂದಾಡಿ ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಅಮಿತಾ ಬಿ ಅವರುಗಳಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬ್ರಿಕ್ಸ್: ಭಾರತ ಚೀನಾ ದ್ವಿಪಕ್ಷೀಯ ಸಭೆ

ಯು.ಬಿ.ಎನ್.ಡಿ., ಅ.23: ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಚೀನಾ...

ರಾಣಿ ಚೆನ್ನಮ್ಮರ ವ್ಯಕ್ತಿತ್ವ ಮಹಿಳೆಯರಿಗೆ ಮಾದರಿ: ಜಿಲ್ಲಾಧಿಕಾರಿ

ಉಡುಪಿ, ಅ.23: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದಿಟ್ಟ ಮಹಿಳೆ...

ಗ್ಲಿಸ್ಟನ್ ವೇದಿಕೆ ಉದ್ಘಾಟನೆ

ವಿದ್ಯಾಗಿರಿ, ಅ.23: ನಾವೀನ್ಯತೆಯು ಜಗತ್ತಿಗೆ ಹೊಸ ವಿಷಯಗಳನ್ನು ಪರಿಚಯಿಸುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ...

ಐಎಂಎ ಉಡುಪಿ ಕರಾವಳಿ ಪದಗ್ರಹಣ

ಉಡುಪಿ, ಅ.23: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿಯ ಪದಗ್ರಹಣ ಸಮಾರಂಭ...
error: Content is protected !!