ಉಡುಪಿ, ಸೆ.3: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಮತ್ತು ಭಂಡಾರ್‌ಕರ‍್ಸ್ ಪದವಿಪೂರ್ವ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ವಿದ್ವತ್ ವಿ ಕಾಮತ್ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಬೋಧಕ, ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.
ಟೇಬಲ್ ಟೆನ್ನಿಸ್: ಉಡುಪಿ ಜ್ಞಾನಸುಧಾದ ವಿದ್ಯಾರ್ಥಿ ವಿದ್ವತ್ ವಿ ಕಾಮತ್ ರಾಜ್ಯಮಟ್ಟಕ್ಕೆ

ಟೇಬಲ್ ಟೆನ್ನಿಸ್: ಉಡುಪಿ ಜ್ಞಾನಸುಧಾದ ವಿದ್ಯಾರ್ಥಿ ವಿದ್ವತ್ ವಿ ಕಾಮತ್ ರಾಜ್ಯಮಟ್ಟಕ್ಕೆ
Date: