ಶಂಕರನಾರಾಯಣ, ಸೆ.2: ಶ್ರೀ ಪಾತಾಳ ದುರ್ಗಾಪರಮೇಶ್ವರಿ ದೇವಸ್ಥಾನ ತಲ್ಲಂಜೆ ಹಾಗೂ ಸಮೃದ್ಧಿ ಯುವಕ ಮಂಡಲ (ರಿ) ಕುಳ್ಳಂಜೆ ಶಂಕರನಾರಾಯಣ ಇವರ ಸಹಯೋಗದೊಂದಿಗೆ ಮುದ್ದು ಕೃಷ್ಣ ಮುದ್ದು ರಾಧೆ ಸ್ಪರ್ಧಾ ಕಾರ್ಯಕ್ರಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಮೂರ್ತಿ ಸೂರ್ಯನಾರಾಯಣ ಬಾಯರಿಯವರು ವಹಿಸಿ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ 50 ಕ್ಕೂ ಅಧಿಕ ಪುಟಾಣಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜೆಸಿಐ ಶಂಕರನಾರಾಯಣದ ಪೂರ್ವದ್ಯಕ್ಷ ರತೀಶ ಕನ್ನಂತ ಉಪಸ್ಥಿತರಿದ್ದು ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಸಾಗಲಿ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಭಾಗವಹಿಸಲು ಸುವರ್ಣಾವಕಾಶ ಎಂದರು.
ವೇದಿಕೆಯಲ್ಲಿ ಸುಬ್ರಾಯ ಶೇಟ್ ತಲ್ಲಂಜೆ, ಸಮೃದ್ಧಿ ಯುವಕ ಮಂಡಲದ ಅಧ್ಯಕ್ಷ ನಾರಾಯಣ ಟಿ., ಕಾರ್ಯದರ್ಶಿ ಭರತ್ ತಲ್ಲಂಜೆ, ದೇವಸ್ಥಾನದ ಸಮಿತಿಯ ಕಾರ್ಯದರ್ಶಿ ಗಣೇಶ ತಲ್ಲಂಜೆ, ಭಜನಾ ಸಮಿತಿಯ ಮುಖ್ಯಸ್ಥರಾದ ನರಸಿಂಹ ನಾಯ್ಕ ಬಾಳೆಕೊಡ್ಲು ಉಪಸ್ಥಿತರಿದ್ದರು. ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಹೆಗ್ಗುಂಜೆ ರಾಜೀವ ಶೆಟ್ಟಿ ಪದವಿಪೂರ್ವ ಕಾಲೇಜು ಹಾಲಾಡಿ, ಇದರ ಪ್ರೌಢಶಾಲಾ ವಿಭಾಗದ ಶಿಕ್ಷಕರಾದ ನಾಗೇಂದ್ರ ರವರು ಬಾಗವಹಿಸಿ ತಮ್ಮ ಅನಿಸಿಕಯನ್ನು ಹಂಚಿಕೊಂಡರು. ವಿ.ಕೆ.ಆರ್ ಆಂಗ್ಲ ಮಾದ್ಯಮ ಶಾಲೆ ಕುಂದಾಪುರದ ಶಿಕ್ಷಕ ಕೆ. ಪರಮೇಶ್ವರ ಉಡುಪ, ಪೂರ್ಣಿಮ ಉದಯ ರಾವ್, ತೀರ್ಪುಗಾರರಾಗಿ ಸಹಕರಿಸಿದ್ದರು.
ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಸದಸ್ಯರು ಭಜನಾ ಸಮಿತಿಯ ಸದಸ್ಯರು ಸಮೃದ್ಧಿ ಯುವಕ ಮಂಡಲದ ಪದಾಧಿಕಾರಿಗಳು ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು ನಾರಾಯಣ ಟಿ ಸ್ವಾಗತಿಸಿ, ಹೆಬ್ಬಾಡಿ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ ತಲ್ಲಂಜೆ ವಂದಿಸಿದರು.