ಉಡುಪಿ, ಸೆ.2: ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ಮಲ್ಪೆ ಪ್ರೌಢಶಾಲೆಯಲ್ಲಿ ನಡೆಯಿತು. ರೋಟರಿ ಉಡುಪಿ ಅಧ್ಯಕ್ಷ ಗುರುರಾಜ ಭಟ್ ಇಂಟರಾಕ್ಟ್ ಅಧ್ಯಕ್ಷ ವಿನಾಯಕ ಮತ್ತು ಅವರ ತಂಡಕ್ಕೆ ಪದಪ್ರಧಾನ ನೆರೆವೇರಿಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದಿಂದ ಶಾಲೆಗೆ ಹೆಸರು ತರಬೇಕೆಂದು ಕರೆನೀಡಿ, ಹೊಸತಂಡಕ್ಕೆ ಶುಭ ಹಾರೈಸಿದರು. ಇಂಟರಾಕ್ಟ್ ಅಧ್ಯಕ್ಷ ವಿನಾಯಕ ಅವರು ತಮ್ಮ ತಂಡದ ಪರಿಚಯ ಮಾಡಿದರು. ಕ್ಲಬ್ಬಿನ ಯುವಸೇವಾ ನಿರ್ದೇಶಕ ಡಾ.ಸುದರ್ಶನ ಭಟ್ ಅವರು ಆಯುರ್ವೇದವು ಉತ್ತಮ ಆರೋಗ್ಯಕ್ಕೆ ಹೇಗೆ ಪೂರಕ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಆರೋಗ್ಯಕ್ಕೆ ಆಹಾರ ಎಷ್ಟು ಮುಖ್ಯ ಎಂದು ವಿವರಿಸಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಗದೀಶ್ ಸಾಲ್ಯಾನ್, ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಭಟ್, ಶಿಕ್ಷಕ ಸಂಯೋಜಕ ವಾಣಿಶ್ರೀ , ರೋಟರಿ ಇಂಟರಾಕ್ಟ್ ಸಂಯೋಜಕಿ ಸಾಧನಾ ಮುಂಡ್ಕೂರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.