ಉಡುಪಿ, ಸೆ.2: 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದು ಅದಕ್ಕೆ ಪೂರ್ವಭಾವಿಯಾಗಿ ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಜಿಲ್ಲೆಯ ಸಮಸ್ಯೆಗಳನ್ನು ತಿಳಿಯಲು ಮತ್ತು ಅಲ್ಲಿನ ಜನರ ಸಂಪರ್ಕ ಮಾಡುವ ಉದ್ದೇಶದಿಂದ ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರದ ಗ್ರಾಮಸ್ಥರನ್ನು, ಬಿಜೆಪಿಯ ಮುಖಂಡರುಗಳನ್ನು ಸುಮಾರು ಚುನಾವಣೆಗೆ ಒಂದು ವರ್ಷ ಪೂರ್ವಭಾವಿಯಾಗಿ ಭೇಟಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದೆ. ಆ ಸಂದರ್ಭದಲ್ಲಿ ಸುಮಾರು 15 ವರ್ಷಗಳ ಹಿಂದೆ ಲೋಕಸಭಾ ಸದಸ್ಯರಾಗಿದ್ದ ದೇಶಕ್ಕೆ ಮಾದರಿ ಸಂಸದರಾಗಿದ್ದ ಡಿ.ಸಿ ಶ್ರೀಕಂಠಪ್ಪನವರು ಮಾಡಿರತಕ್ಕಂತಹ ಜನಸ್ನೇಹಿ ಕೆಲಸಗಳನ್ನು ಕೇಳಲ್ಪಟ್ಟೆ. ನನಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರತೆ ಕಂಡಿದ್ದು ಅವರನ್ನು ಸ್ಮರಿಸುವಂತಹ ಯಾವುದೇ ಶಾಶ್ವತವಾದ ಸ್ಮಾರಕಗಳು ಇಲ್ಲದಿರುವುದು ನನ್ನ ಗಮನಕ್ಕೆ ಬಂದಾಗ ನನಗೆ ಟಿಕೆಟ್ ಸಿಗಲಿ ಸಿಗದೇ ಇರಲಿ ಅಧಿಕಾರ ಸಿಗಲಿ ಸಿಗದೇ ಇರಲಿ ನನ್ನ ಸ್ವಂತ ಖರ್ಚಿನಲ್ಲಿ ಶ್ರೀಕಂಠಪ್ಪನವರ ಒಂದು ಸ್ಮಾರಕವನ್ನು ರಚಿಸಬೇಕೆನ್ನುವ ಉದ್ದೇಶದಿಂದ ನಗರಸಭೆಗೆ ಅರ್ಜಿಯನ್ನು ಸಲ್ಲಿಸಿ ಚಿಕ್ಕಮಗಳೂರಿನ ಹೃದಯ ಭಾಗದಲ್ಲಿ ವೃತ್ತವನ್ನು ನಿರ್ಮಿಸಬೇಕೆಂಬ ತೀರ್ಮಾನ ಮಾಡಿದ್ದೆ. ಈಗಾಗಲೇ ಕಾಮಗಾರಿ ಅಂತಿಮ ಹಂತ ತಲುಪಿದ್ದು ಇದೇ ಸೆಪ್ಟೆಂಬರ್ ತಿಂಗಳಲ್ಲಿ ಶ್ರೀಕಂಠಪ್ಪನವರ ಕುಟುಂಬದ ಸದಸ್ಯರ ಮೂಲಕ ಅತ್ಯಂತ ಸರಳವಾಗಿ ಉದ್ಘಾಟನೆ ಮಾಡಬೇಕೆಂಬ ಸಂಕಲ್ಪವನ್ನು ಮಾಡಿದ್ದೇನೆ. ಡಿ.ಸಿ ಶ್ರೀಕಂಠಪ್ಪ ಎನ್ನುವ ಒಬ್ಬ ಸರಳ ವ್ಯಕ್ತಿಯನ್ನು ಚಿಕ್ಕಮಗಳೂರು ಜಿಲ್ಲೆಯ ಜನತೆ ಯಾವತ್ತು ಸ್ಮರಿಸುವಂತಾಗಲಿ ಎನ್ನುವುದೇ ನನ್ನ ಹಾರೈಕೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಶ್ರೀಕಂಠಪ್ಪನವರ ಸ್ಮಾರಕ ಲೋಕಾರ್ಪಣೆ: ಪ್ರಮೋದ್ ಮಧ್ವರಾಜ್
ಸೆಪ್ಟೆಂಬರ್ ತಿಂಗಳಲ್ಲಿ ಶ್ರೀಕಂಠಪ್ಪನವರ ಸ್ಮಾರಕ ಲೋಕಾರ್ಪಣೆ: ಪ್ರಮೋದ್ ಮಧ್ವರಾಜ್
Date: