ಕಾರ್ಕಳ, ಸೆ.2: ಕಾರ್ಕಳ ಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಹೊಸಬೆಳಕು ಸೇವಾಶ್ರಮಕ್ಕೆ ಭೇಟಿ ನೀಡಲಾಯಿತು. ವಿದ್ಯಾರ್ಥಿಗಳು ಆಶ್ರಮದ ವಾಸಿಗಳಿಗೆ ತಾವು ತಂದ ದಿನಸಿ ಸಾಮಾಗ್ರಿಗಳನ್ನು ನೀಡಿದರು. ವಿವಿಧ ಆಟಗಳು, ಗಾನ-ನೃತ್ಯದ ಮೂಲಕ ಮನರಂಜಿಸಿದರು.
ಹೊಸಬೆಳಕು ಸೇವಾ ಟ್ರಸ್ಟ್ನ ಮುಖ್ಯಸ್ಥೆ ತನುಲಾ ತರುಣ್, ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಉಪಪ್ರಾಂಶುಪಾಲ ಸಾಹಿತ್ಯ, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ವಾಣಿ ಕೆ., ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ರಾ,ಸೇ.ಯೋ.ಯಕಾರ್ಯಕ್ರಮಾಧಿಕಾರಿ ರವಿ ಜಿ., ವಾಣಿಜ್ಯ ವಿಭಾಗದ ಉಪನ್ಯಾಸಕ ಶೈಲೇಶ್ ಶೆಟ್ಟಿ, ಬೋಧಕರಾದ ಸಂಗೀತಾ ಕುಲಾಲ್, ಸುಮಿತ್ರಾ, ಕೀರ್ತಿ ಆಚಾರ್ಯ, ಶಮಿತಾ, ವಿಲ್ಮಾಪ್ರಿಯಾ, ಸಂತೋಷ್ ನೆಲ್ಲಿಕಾರು ಉಪಸ್ಥಿತರಿದ್ದರು.