ಉಡುಪಿ, ಸೆ.1: ಭಾರತೀಯ ಜನತಾ ಪಾರ್ಟಿ ವಳಕಾಡು ವಾರ್ಡ್, ಉಡುಪಿ ಇದರ ವತಿಯಿಂದ ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಹಾಗೂ ರಜನಿ ಹೆಬ್ಬಾರ್ ರವರಿಗೆ ವಳಕಾಡು ವಾರ್ಡ್ ಕಾರ್ಯಕರ್ತರಿಂದ ಚಿಟ್ಪಾಡಿಯ ಸಸಸ್ವತಿ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಶುಭ ಹಾರೈಸಿದರು. ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ನಗರಸಭಾ ಸದಸ್ಯರಾದ ಗಿರೀಶ್ ಅಂಚನ್, ಟಿ. ಜಿ. ಹೆಗ್ಡೆ, ಜಿಲ್ಲಾ ಬಿಜೆಪಿ ಪದಾಧಿಕಾರಿಗಳಾದ ಶ್ರೀಶ ನಾಯಕ್, ಶ್ರೀನಿಧಿ ಹೆಗ್ಡೆ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಹಾಗೂ ವಳಕಾಡು ವಾರ್ಡಿನ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವಳಕಾಡು: ನಗರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ

ವಳಕಾಡು: ನಗರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ
Date: