ಕುತ್ಯಾರು, ಆ.30: ಭಾರತೀಯ ಅಂಚೆ ಇಲಾಖೆ, ಉಡುಪಿ ವಿಭಾಗ ಉಡುಪಿ ಹಾಗೂ ಕುತ್ಯಾರು ಗ್ರಾಮ ಪಂಚಾಯತ್ ಇವರ ಸಹಭಾಗಿತ್ವದಲ್ಲಿ ಕುತ್ಯಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅಂಚೆ ಜನಸಂಪರ್ಕ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ ನೆರವೇರಿಸಿದರು. ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಆಚಾರ್ಯ, ಉಪಾಧ್ಯಕ್ಷರಾದ ಭಾರತಿ, ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಕುತ್ಯಾರು ಯುವಕ ಮಂಡಲದ ಅಧ್ಯಕ್ಷರಾದ ಸುಶಾಂತ್ ಶೆಟ್ಟಿ, ಅಂಚೆ ಇಲಾಖೆ ಅಧ್ಯಕ್ಷರಾದ ರಮೇಶ್ ಪ್ರಭು, ಅಂಚೆ ಇಲಾಖೆಯ ಉಪ ಅಧೀಕ್ಷಕರಾದ ಕೃಷ್ಣರಾಜ್ ವಿಠಲ್ ಭಟ್, ಪೋಸ್ಟ್ ಮಾಸ್ಟರ್ ದಿವಾಕರ್ ಶೆಟ್ಟಿ, ಕುತ್ಯಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಾಜೇಶ್ ಶೆಟ್ಟಿ ಹಾಗೂ ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಕುತ್ಯಾರು: ಅಂಚೆ ಜನಸಂಪರ್ಕ ಅಭಿಯಾನ

ಕುತ್ಯಾರು: ಅಂಚೆ ಜನಸಂಪರ್ಕ ಅಭಿಯಾನ
Date: