ಉಡುಪಿ, ಆ.29: ಇನ್ನಂಜೆ ಯುವಕ ಮಂಡಲದ ವತಿಯಿಂದ ಶ್ರೀ ಕೃಷ್ಣ ಲೀಲೋತ್ಸವದ ಪ್ರಯುಕ್ತ ಇನ್ನಂಜೆಯಲ್ಲಿ ಮೊಸರು ಕುಡಿಕೆ ಕ್ರೀಡಾಕೂಟ-2024 ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಇನ್ನಂಜೆ ಯುವಕ ಮಂಡಲ ಅಧ್ಯಕ್ಷರಾದ ಮಧುಸೂದನ್ ಆಚಾರ್ಯ, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ, ಶ್ರೀ ಕ್ಷೇ.ಧ.ಗ್ರಾ ಯೋಜನೆ ಕಾಪು ಯೋಜನಾಧಿಕಾರಿಗಳಾದ ಮಮತಾ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನವೀನ್ ಅಮೀನ್ ಹಾಗೂ ಇನ್ನಂಜೆ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇನ್ನಂಜೆ: ಮೊಸರು ಕುಡಿಕೆ ಕ್ರೀಡಾಕೂಟ

ಇನ್ನಂಜೆ: ಮೊಸರು ಕುಡಿಕೆ ಕ್ರೀಡಾಕೂಟ
Date: