Saturday, September 21, 2024
Saturday, September 21, 2024

ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘ: ಪದಾಧಿಕಾರಿಗಳ ಆಯ್ಕೆ

ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘ: ಪದಾಧಿಕಾರಿಗಳ ಆಯ್ಕೆ

Date:

ಉಡುಪಿ, ಆ.28: ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ, ಸಾರಥಿ ಭವನ, ಉಡುಪಿ ಇದರ ಮಹಾಸಭೆಯಲ್ಲಿ ಮುಂದಿನ 5 ವರ್ಷಗಳ ಅವಧಿಗೆ ಲೋಕೋಪಯೋಗಿ ಇಲಾಖೆಯ ಜಬಿಯುಲ್ಲಾ ಖಾನ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಆರೋಗ್ಯ ಇಲಾಖೆಯ ಧರ್ಮೇಂದ್ರ ಎಸ್, ಕಾರ್ಯದರ್ಶಿಯಾಗಿ ಸಮಾಜ ಕಲ್ಯಾಣ ಇಲಾಖೆಯ ದಾಮೋದರ, ಖಜಾಂಜಿಯಾಗಿ ಅಬಕಾರಿ ಇಲಾಖೆಯ ದಿನೇಶ್, ಸಂಘಟನಾ ಕಾರ್ಯದರ್ಶಿಯಾಗಿ ಸಣ್ಣ ನೀರಾವರಿ ಇಲಾಖೆಯ ಟಿ.ಕೆ ದೇವದಾಸ್, ಜೊತೆ ಕಾರ್ಯದರ್ಶಿಯಾಗಿ ಆರೋಗ್ಯ ಇಲಾಖೆಯ ಸತೀಶ್ ಕೆ ಮತ್ತು ಕಾರ್ಯಕಾರಿ ಸಮಿತಿಗೆ ಕಂದಾಯ ಇಲಾಖೆಯ ಮಚೇಂದ್ರ ಜೋಗಿ ಹಾಗೂ ಸಿದ್ದಾರೂಡ, ಆರೋಗ್ಯ ಇಲಾಖೆಯ ದಿನೇಶ್ ಕುಮಾರ್, ಶಂಕರ ಪಿ ಹಾಗೂ ಮಂಜುನಾಥ್ ಅವರನ್ನು ಸರ್ವಾನುಮತದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಸೇವೆಯಿಂದ ವಯೋನಿವೃತ್ತಿ ಹೊಂದಿದ ಅರಣ್ಯ ಇಲಾಖೆಯ ಜೋಯ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತನ್ನ, ಮಾಜಿ ಅಧ್ಯಕ್ಷ ಸೂರ್ಯ ಶೇರಿಗಾರ್, ಮಾಜಿ ಉಪಾಧ್ಯಕ್ಷ ಕೇಶವ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಶೇಷಪ್ಪ ಹಾಗೂ ರೋಹಿತ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!