ಉಡುಪಿ, ಆ.21: ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಘಟನೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಉಡುಪಿ ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ಹಿರಿಯ ಛಾಯಾಚಿತ್ರ ಕಲಾವಿದ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದೇವದಾಸ್ ಕಾಮತ್ ರವರಿಗೆ ಗೌರವ ಅಭಿನಂದನೆ ನಡೆಯಿತು. ಎಸ್.ಕೆ.ಪಿ.ಎ ಉಡುಪಿ ವಲಯದ ಅಧ್ಯಕ್ಷ ಸುಧೀರ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಜನಾರ್ದನ್ ಕೊಡವೂರು, ಮಾಜಿ ಅಧ್ಯಕ್ಷರಾದ ಸುಕುಮಾರ್ ಕುಕ್ಕಿಕಟ್ಟೆ, ಭಾಸ್ಕರ್ ಉದ್ಯಾವರ, ಅನೀಶ್ ಶೆಟ್ಟಿಗಾರ್, ಸಮಿತಿಯ ಸದಸ್ಯರಾದ ಪ್ರವೀಣ ಕೊರೆಯ, ಉದಯ ನಾಯ್ಕ್, ಪ್ರಕಾಶ್, ಪ್ರಸಾದ್ ಜತ್ತನ್, ಅಶೋಕ್, ಸತೀಶ್, ರಮೇಶ್, ಚಂದ್ರಕಲಾ ಕಾಮತ್ ಹಾಗೂ ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಛಾಯಾಗ್ರಾಹಕರು ಉಪಸ್ಥಿತರಿದ್ದರು.
ವಿಶ್ವ ಛಾಯಾಗ್ರಹಣ ದಿನಾಚರಣೆ- ದೇವದಾಸ್ ಕಾಮತ್ ರವರಿಗೆ ಗೌರವ ಅಭಿನಂದನೆ

ವಿಶ್ವ ಛಾಯಾಗ್ರಹಣ ದಿನಾಚರಣೆ- ದೇವದಾಸ್ ಕಾಮತ್ ರವರಿಗೆ ಗೌರವ ಅಭಿನಂದನೆ
Date: