ಉಡುಪಿ, ಆ.20: ಪರಿವಾರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ ಮಹಾಸಭೆ ಅಜ್ಜರಕಾಡು ಪುರಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಮಾಜಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕ ಶ್ರೀಶ ಕೊಡವೂರು ಸ್ವಾಗತಿಸಿದರು. ಮಹಾಸಭೆಯಲ್ಲಿ ಸಂಘದ ಸದಸ್ಯರಿಗೆ 12% ಡಿವಿಡೆಂಡ್ ಘೋಷಿಸಲಾಯಿತು. ಉಪಾಧ್ಯಕ್ಷ ರಮೇಶ್ ಶೆಟ್ಟಿ ಕಾರ್ಕಳ, ನಿರ್ದೇಶಕರಾದ ರಾಮಚಂದ್ರ ಸನಿಲ್, ಗಣೇಶ್ ಕುಮಾರ್, ಸ್ನೇಹ ಪ್ರಭಾ ಕಮಲಾಕ್ಷ , ರಾಧಿಕಾ ಕಾಮತ್, ಹಾಗೂ ಸಂಘದ ಸಲಹೆಗಾರರಾದ ಪ್ರೊ. ಕಮಲಾಕ್ಷ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಂಜಿತಾ ಪ್ರವೀಣ್ 2023-24ರ ಆಡಳಿತ ವರದಿಯನ್ನು ಮಂಡಿಸಿದರು. ನಿರ್ದೇಶಕ ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಸಂಘದ ಸಲಹೆಗಾರ, ಹಿರಿಯ ಸಹಕಾರಿ ಧುರೀಣ ದಿ. ರಘುರಾಮ ಎಸ್. ಶೆಟ್ಟಿ ಇವರಿಗೆ ನುಡಿನಮನ ಸಲ್ಲಿಸಲಾಯಿತು.
ಪರಿವಾರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: ಮಹಾಸಭೆ

ಪರಿವಾರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: ಮಹಾಸಭೆ
Date: