ಉಡುಪಿ, ಆ.19: ಯಕ್ಷರಂಗಾಯಣ ಕಾರ್ಕಳ ಇದರ ನೂತನ ನಿರ್ದೇಶಕರಾಗಿ ಬಿ.ಆರ್.ವೆಂಕಟರಮಣ ಐತಾಳ್ ರವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ನಿಕಟಪೂರ್ವ ಯಕ್ಷರಂಗಾಯಣದ ನಿರ್ದೇಶಕ ಜೀವರಾಮ್ ಸುಳ್ಯ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ್ ಕೋಟ್ಯಾನ್, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಸದಸ್ಯರಾದ ನಾಗೇಶ್ ಉದ್ಯಾವರ, ಸಂತೋಷ್ ಹಿರಿಯಡ್ಕ, ರಂಗಕರ್ಮಿಗಳಾದ ಬಾಸುಮ ಕೊಡಗು, ಸುಕುಮಾರ್ ಮುದ್ರಾಡಿ, ಕಾವ್ಯವಾಣಿ, ರಾಜು ಮಣಿಪಾಲ, ಚಂದ್ರನಾಥ ಬಜಗೋಳಿ, ಸಂದೇಶ್, ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಸದಸ್ಯರಾದ ಭರತ್, ಪದ್ಮಪ್ರಸಾದ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷರಂಗಾಯಣ ಕಾರ್ಕಳ: ನೂತನ ನಿರ್ದೇಶಕರ ಅಧಿಕಾರ ಸ್ವೀಕಾರ

ಯಕ್ಷರಂಗಾಯಣ ಕಾರ್ಕಳ: ನೂತನ ನಿರ್ದೇಶಕರ ಅಧಿಕಾರ ಸ್ವೀಕಾರ
Date: