ಉಡುಪಿ, ಆ.13: ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ ಜಿಲ್ಲಾಮಟ್ಟದ ಗುಂಪು ಆಟಗಳ ಸ್ಪರ್ಧೆಯಲ್ಲಿ ಬೈಲೂರಿನ ನಚಿಕೇತ ವಿದ್ಯಾಲಯದ ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಾಲಾ ಸಹ ಶಿಕ್ಷಕಿ ರೇಷ್ಮಾ ಹಾಗೂ ತರಬೇತುದಾರರಾದ ಸಜನ್ ಮತ್ತು ಗಣೇಶ್ ಇವರನ್ನು ಶಾಲಾ ಸಂಚಾಲಕರಾದ ಡಿ. ಮಚ್ಚೆಂದ್ರನಾಥ ಗುರೂಜಿ ಅಭಿನಂದಿಸಿದರು. ಹೆಬ್ರಿಯ ಪಿ. ಆರ್.ಎನ್. ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಗುಂಪು ಆಟಗಳ ಸ್ಪರ್ಧೆ ನಡೆಯಿತು.
ನಚಿಕೇತ ವಿದ್ಯಾಲಯ ಬಾಲಕರ ಕಬಡ್ಡಿ ತಂಡ ರಾಜ್ಯಮಟ್ಟಕ್ಕೆ

ನಚಿಕೇತ ವಿದ್ಯಾಲಯ ಬಾಲಕರ ಕಬಡ್ಡಿ ತಂಡ ರಾಜ್ಯಮಟ್ಟಕ್ಕೆ
Date: