Sunday, November 24, 2024
Sunday, November 24, 2024

ಭಾಷೆಯ ಜತೆ ಸಂಬಂಧಗಳ ಪ್ರೀತಿ ಬೆಳೆಸಿ: ಚಿತ್ರನಟ ರಘು ಪಾಂಡೇಶ್ವರ

ಭಾಷೆಯ ಜತೆ ಸಂಬಂಧಗಳ ಪ್ರೀತಿ ಬೆಳೆಸಿ: ಚಿತ್ರನಟ ರಘು ಪಾಂಡೇಶ್ವರ

Date:

ಕೋಟ, ಆ.12: ಭಾಷೆಯ ಜತೆಗೆ ಸಂಬಂಧಗಳ ಬಾಂಧವ್ಯ ವೃದ್ಧಿಸಿ ಎಂದು ಚಿತ್ರನಟ ರಘು ಪಾಂಡೇಶ್ವರ ಹೇಳಿದರು. ಭಾನುವಾರ ಕೋಟದ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲ ಕೋಟ ಇದರ ಮಾರ್ಗದರ್ಶನದಲ್ಲಿ ಕಸಾಪ ಬ್ರಹ್ಮಾವರ ಘಟಕ ಇದರ ಸಹಯೋಗದೊಂದಿಗೆ ಆಸಾಡಿ ಒಡ್ರ್ -2024 ಊರ್ ಕೇರಿ ಬದ್ಕಿನ್ ಹಬ್ಬು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು. ಇಂದಿನ ಮಕ್ಕಳು ಬರೇ ಮೊಬೈಲ್ ಗೀಳಿನಲ್ಲಿ ಕಾಲಹರಣ ಮಾಡುವ ಕಾಲಘಟ್ಟದಲ್ಲಿ ಕುಂದಗನ್ನಡದ ಭಾಷೆಯ ಬಗ್ಗೆ ಬದುಕಿನ ವಿಚಾರಧಾರೆಗಳನ್ನು ಪಸರಿಸುವ ಕೆಲಸ ಆಗಲಿ. ಅದರ ಜತೆಗೆ ಅವಕಾಶ ಎಲ್ಲಿ ಸಿಗುತ್ತದೆಯೋ ಅದನ್ನು ಬಳಸಿಕೊಳ್ಳಿ ಸ್ನೇಹದಿಂದ ಸಂಬಂಧಗಳನ್ನು ಗಟ್ಟಿಗೊಳಿಸಿ ಪಂಚವರ್ಣ ಮಹಿಳಾ ಮಂಡಲ ಈ ಕುಂದಗನ್ನಡ ಸಂಸ್ಕೃತಿ ಉಳಿಸುವ ಕಾರ್ಯ ಪ್ರಶಂಸನೀಯ ಎಂದರು.

ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ ಆನಂದ್ ಸಿ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕುಂದಾಪ್ರ ಭಾಷೆಯಲ್ಲಿ ವೈವಿಧ್ಯತೆ ಇದೆ. ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿದ ಬದುಕಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು ಎಂದರು. ಗ್ರಾಮೀಣ ಪರಿಕರವನ್ನು ಕಸಾಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್, ಆಸಾಡಿ ಒಡ್ರ್ ಗ್ರಾಮೀಣ ತಿನಿಸುಗಳನ್ನು ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಸ್ ಕುಂದರ್ ಅನಾವರಣಗೊಳಿಸಿದರು. ಗೋಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸರಸ್ವತಿ ಜಿ ಪುತ್ರನ್ ಸಭಾ ಕಾರ್ಯಕ್ರಮ ತೆಂಗಿನ ಹೂ ಅರಳಿಸುವ ಮೂಲಕ ಚಾಲನೆ ನೀಡಿದರು. ಆಸಾಡಿ ಒಡ್ರ್ ಸಾಧಕ ಪುರಸ್ಕಾರವನ್ನು ಕುಂದಗನ್ನಡದ ಬಹುಮುಖ ಪ್ರತಿಭೆ ಸುಜಾತ ಎಂ ಬಾಯರಿಯವರಿಗೆ ನೀಡಲಾಯಿತು. ವಿಶೇಷ ಅಭಿನಂದನೆ ಪಂಚವರ್ಣ ಮಹಿಳಾ ಮಂಡಲದ ಪ್ರಥಮ ಅಧ್ಯಕ್ಷೆ ಕಲಾವತಿ ಅಶೋಕ್ ರವರಿಗೆ ಸಲ್ಲಿಸಲಾಯಿತು. ಚಿತ್ರನಟ ರಘು ಪಾಂಡೇಶ್ವರ ಇವರನ್ನು ಸನ್ಮಾನಿಸಲಾಯಿತು. ಹಂದಟ್ಟು ಮಹಿಳಾ ಬಳಗದ ವತಿಯಿಂದ ಮಟಪಾಡಿಯ ವಿಜಯಬಾಲನಿಕೇತ ಬಾಲಾಶ್ರಮಕ್ಕೆ ದಿನಸಿ ಪರಿಕರವನ್ನು ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ ಆಶ್ರಮದ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಕೋಟ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಲಿಲಾವತಿ ಗಂಗಾಧರ್, ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ,ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು. ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ವೀಣಾ ಪ್ರಕಾಶ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶಕೀಲ ಎನ್ ಪೂಜಾರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕೋಶಾಧಿಕಾರಿ ಸುಜಾತ ಉದಯ್ ತಿಂಗಳಾಯ ವಂದಿಸಿದರು. ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

ಗಮನ ಸೆಳೆದ ಪರಿಕರ, ತಿನಿಸು, ಹೊಲಿ ಕರೆಯುವುದು: ಕಾರ್ಯಕ್ರಮದಲ್ಲಿ ಗ್ರಾಮೀಣ ಪರಿಕರಗಳಾದ ಚೆನ್ನಿಮಣಿ, ಕೊಪ್ಪರಿಗೆ, ನೇಗಿಲು ನೋಗ, ತಾಮ್ರದ ಹರಿ, ಮಣ್ ಮರ್ಗಿ, ಹಳೆಯ ಕಾಲದ ಗಡಿಯಾರ, ಗಾಡಿ ಕೂಸಣ್ಣನ ಎತ್ತಿನಗಾಡಿ, ಗಿರೀಜಾ ಬೋಜಣ್ಣ ಇವರ ಕಂಬಳ ಪರಿಕರ, ಸಾಂಬಾರ್ ಬಟ್ಲ್, ನರೋಳಿ ಸೊಪ್ಪಿನ ದೋಸೆ, ಬೆಸಿದ ಕಡ್ಲೆ,ಅಕ್ಕಿ ಉಂಡಿ, ಹೀಗೆ ೮೦ಕ್ಕೂ ಅಧಿಕ ಬಗೆಯ ತಿಂಡಿ ತಿನಿಸುಗಳ ಸ್ಪರ್ಧೆಯಲ್ಲಿ ಕಂಡುಬಂತು. ಮಣೂರು ಜಯರಾಮ ಶೆಟ್ಟಿ ಹಾಗೂ ಹಂದಟ್ಟು ಸುಬ್ಬಯ್ಯ ಪೂಜಾರಿ ಹೊಲಿ ಕರೆಯುವ ದೃಶ್ಯ ವಿಶೇಷವಾಗಿ ಗಮನ ಸೆಳೆಯಿತು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶಿಷ್ಠವಾಗಿ ಪಂಚವರ್ಣ ಮಹಿಳಾ ಮಂಡಲದ ಪದಾಧಿಕಾರಿಗಳು ಹಳೆಯ ಸಂಪ್ರದಾಯದಂತೆ ವೀಳ್ಯೆದೆಲೆ, ಅಡಿಕೆ, ತುಳಸಿ ಕಟ್ಟೆ, ಕಳಶ, ಅರಸಿನ ಕುಂಕುಮ, ಬಳೆ, ಹೂವು, ಸಿಸಿಂಗಾರ, ಹಣ್ಣು, ನೀರು ಬೆಲ್ಲ ಹಿಡಿದು ವೇದಿಕೆಯ ಮೇಲೆ ತಂದಿರಿಸಿ ಗಣ್ಯರನ್ನು ಸ್ವಾಗತಿಸಿದರು. ಸ್ನೇಹಕೂಟದ ಸಂಚಾಲಕಿ ಭಾರತಿ ವಿ ಮಯ್ಯ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!