Saturday, January 18, 2025
Saturday, January 18, 2025

ಉಡುಪಿಯಲ್ಲಿ ಇಂಡಿಯಾ ಸ್ವೀಟ್ ಹೌಸ್ 31ನೇ ಮಳಿಗೆ ಆರಂಭ

ಉಡುಪಿಯಲ್ಲಿ ಇಂಡಿಯಾ ಸ್ವೀಟ್ ಹೌಸ್ 31ನೇ ಮಳಿಗೆ ಆರಂಭ

Date:

ಉಡುಪಿ, ಆ.9: ನಾವು ಊಟ ಮಾಡುವುದು ಮುಖ್ಯವಲ್ಲ, ಊಟ ಮಾಡಿದ್ದನ್ನು ಜೀರ್ಣಿಸಿಕೊಳ್ಳುವುದು ಮುಖ್ಯ. ತಿನ್ನುವಿಕೆ ಅಜೀರ್ಣ ಆಗದ ರೀತಿಯಲ್ಲಿ ಇರಬೇಕು. ಹಿರಿಯರು ಸಾಕಷ್ಟು ಸಂದೇಶಗಳನ್ನು ನೀಡಿದ್ದಾರೆ. ಭಾರತೀಯ ಸಿಹಿ ಮನೆ ಉಡುಪಿಯಲ್ಲಿ ಆರಂಭವಾಗಿದೆ. ತಿನ್ನುವ ಹಬ್ಬ ಶುರುವಾಗಿರುವುದು ಕೃಷ್ಣನೂರಿನಲ್ಲಿ ಸಂಭ್ರಕ್ಕೆ ಕಾರಣವಾಗಿದೆ ಎಂದು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಉಡುಪಿಯಲ್ಲಿ ಇಂಡಿಯಾ ಸ್ವೀಟ್ ಹೌಸ್ 31ನೇ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ಸಿಹಿತಿಂಡಿ ಮಳಿಗೆ ಎಂಬ ಹೆಗ್ಗಳಿಕೆಗೆ ಇಂಡಿಯಾ ಸ್ವೀಟ್ ಹೌಸ್ ಮಳಿಗೆ ಪಾತ್ರ ಆಗಿದೆ. ಕೇವಲ ಮೂರು ವರ್ಷಗಳಲ್ಲಿ ಇಂಡಿಯಾ ಸ್ವೀಟ್ ಹೌಸ್ನ 31 ನೇ ಮಳಿಗೆ ಉದ್ಘಾಟನೆ ಆಗಿರುವುದು ಇದರ ಅಭಿವೃದ್ಧಿಗೆ ಸಾಕ್ಷಿ ಆಗಿದೆ. ಅಧಿಕೃತ ಭಾರತೀಯ ಸಿಹಿ ತಿಂಡಿಗಳು ಮತ್ತು ಖಾರಗಳನ್ನು ಒದಗಿಸುವ ಸಂಸ್ಥೆಯ ಬದ್ಧತೆಗೆ ಈ ಬೆಳವಣಿಗೆ ಸಾಕ್ಷಿ ಆಗಿದೆ ಎಂದರು. ಆರೋಗ್ಯಕ ಹಾಗೂ ಅನಾರೋಗ್ಯಕ್ಕೆ ಆಹಾರ ಮುಖ್ಯ ಆಗಿರುತ್ತದೆ. ಅದರಂತೆ ಈ ಬದ್ಧತೆಯಲ್ಲಿ ಇಂಡಿಯಾ ಸ್ವೀಟ್ ಹೌಸ್ ಗ್ರಾಹಕರಿಗೆ ಜೀರ್ಣ ಆಗುವಂತಹ ಖಾದ್ಯಗಳನ್ನು ತಯಾರು ಮಾಡುವ ಮೂಲಕ 31ನೇ ಮಳಿಗೆ ಆರಂಭಿಸುತ್ತಿದ್ದಾರೆ. ಸಿಹಿ ಪ್ರಿಯ ಕೃಷ್ಣ, ಹಾಗಾಗೀ ಉಡುಪಿಯಲ್ಲಿ ಆರಂಭ ಆಗಿರುವ ಭಾರತೀಯ ಸಿಹಿ ಮನೆ ಮತ್ತಷ್ಟು ಸಂಸ್ಥೆಗಳನ್ನು ದೇಶದಾದ್ಯಂತ ವಿಸ್ತರಣೆ ಮಾಡುವಂತೆ ಆಗಲಿ ಎಂದರು.

ನಟ ಸಿಹಿಕಹಿ ಚಂದ್ರು ಅವರು ಮಾತನಾಡಿ, ಇಂಡಿಯಾ ಸ್ವೀಟ್ ಹೌಸ್ ಪ್ರಾರಂಭ ಮಾಡಿರುವುದರ ಹಿಂದೇ ಸಾಕಷ್ಟು ಶ್ರಮ ಇದೆ. ಮೂರು ವರ್ಷಗಳ ಹಿಂದೆ ಆರಂಭಗೊಂಡಿರುವ ಇಂಡಿಯಾ ಸ್ವೀಟ್ ಹೌಸ್ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದೆ. ಈ ಸಂಸ್ಥೆಯಲ್ಲಿ ದುಡಿಯುವ ಎಲ್ಲ ವರ್ಗ ನಮ್ಮದೇ ಸಹಿ ಸಂಸ್ಥೆ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು. ವಿಶ್ವನಾಥ್ ಮೂರ್ತಿ ಅವರು ಮಾತನಾಡಿ, ಇಂಡಿಯಾ ಸ್ವೀಟ್ ಹೌಸ್ ಭಾರತೀಯ ಸಿಹಿ ತಿಂಡಿಗಳ ವೈವಿಧ್ಯಮಯ ಶ್ರೇಣಿ ಹೊಂದಿದೆ. ಗ್ರಾಹಕರು ಅಭಿರುಚಿಗೆ ತಕ್ಕಂತೆ ಖಾದ್ಯಗಳನ್ನು ತಯಾರಿಸಲಾಗಿದೆ. ಮೈಸೂರು ಪಾಕ್ ಜತೆಗೆ ಬೆಂಗಾಲಿ ಸಿಹಿ ತಿಂಡಿಗಳಾದ ಕ್ಷೀರ್ ಮೋಹನ್ ಮತ್ತು ರಸ್ಮಂಜೂರಿ ಕೂಡ ಸವಿಯಬಹುದು. ಉತ್ತರ ಭಾರತದ ನೆಚ್ಚಿನ ತಿಂಡಿಗಳಾದ ಗುಲಾಬ್ ಜಾಮೂನ್ ಮತ್ತು ಜಲೇಬಿಯಿಂದ ಹಿಡಿದು ರಾಜಸ್ಥಾನದ ಡ್ರೈಫ್ರೂಟ್ ಪೇಡಾಗಳವರೆಗೆ ಇಂಡಿಯಾ ಸ್ವೀಟ್ ಹೌಸ್ ಎಲ್ಲ ತರಹದ ಸಿಹಿ ತಿಂಡಿಗಳನ್ನು ಗ್ರಾಹಕರಿಗೆ ನೀಡುವ ಕೆಲಸ ಮಾಡಿದೆ. ಇನ್ನು ಘಮಘಮಿಸುವ ಲೈವ್ ಚಾಟ್ ಕೌಂಟರ್ ಅನ್ನು ಒಳಗೊಂಡಿದೆ. ಸ್ಟಫ್ಡ್ ಚಿಲ್ಲಿ ಬಜ್ಜಿ, ಆಲೂ ಮತ್ತು ಈರುಳ್ಳಿ ಸಮೋಸಾ ಮತ್ತು ತುಪ್ಪದ ಜಲೇಬಿ ಸೇರಿದಂತೆ ಹಲವಾರು ತಿಂಡಿಗಳು ಲಭ್ಯ ಇವೆ ಎಂದರು.

ಇಂಡಿಯಾ ಸ್ವೀಟ್ ಹೌಸ್ ಮಳಿಗೆಯಲ್ಲಿ 300 ಕ್ಕೂ ಹೆಚ್ಚು ಬಗೆ ಸಿಹಿ ತಿಂಡಿಗಳು, ಖಾರಗಳು ಮತ್ತು ಚಾಟ್‌ ಉತ್ಪನ್ನಗಳ ಶ್ರೇಣಿ ಲಭ್ಯವಿದೆ. ಈ ಮಳಿಗೆಯಲ್ಲಿ ಗ್ರಾಹಕರಿಗೆ ಆರಾಮದಾಯಕವಾಗಿ ಕುಳಿತು ಸಿಹಿ ತಿಂಡಿ ಸವಿಯಲು ವಿಶಾಲ ಜಾಗವಿದ್ದು, ಆಸನ ವ್ಯವಸ್ಥೆ ಮಾಡಲಾಗಿದೆ. ಸ್ನೇಹಿತರು ಮತ್ತು ಕುಟುಂಬದ ಜತೆ ತಮ್ಮ ಇಷ್ಟದ, ರುಚಿಕರ ಸಿಹಿ ತಿಂಡಿಗಳನ್ನು ಸೇವನೆ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಸ್ವೀಟ್ ಹೌಸ್‌ನ ಸಹ-ಸಂಸ್ಥಾಪಕ ಶ್ವೇತಾ ರಾಜಶೇಖರ್ ಸೇರಿದಂತೆ ಹಲವರು ಇದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!