Monday, February 24, 2025
Monday, February 24, 2025

ಹೊಳೆ ಹೂಳೆತ್ತುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಹೊಳೆ ಹೂಳೆತ್ತುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

Date:

ಕೋಟ, ಆ.7: ನಾವು ಮುಗ್ಧ ರೈತಾಪಿ ವರ್ಗವಾಗಿದ್ದೇವೆ, ಇಲ್ಲಿ ಎಷ್ಟು ಸಮಸ್ಯೆಯಾದರೂ ಪ್ರತಿಭಟಿಸುವ ಮನಸ್ಥಿತಿಯಿಲ್ಲ. ಅಸಾಯಕ ವ್ಯವಸ್ಥೆ, ಯಾವುದೇ ಸರಕಾರ ಇದ್ದರೂ ರೈತರ ಪರವಾಗಿ ಇರುತ್ತದೆ ಎಂಬ ನಂಬಿಕೆ, ಅದರಲ್ಲೆ ರೈತ ಸಮುದಾಯ ಜೀವನ ಕಳೆಯುವಂತ್ತಾಗಿದೆ. ರೈತರ ನೋವು ಆಲಿಸುವವರು ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ ಇದಕ್ಕೆ ಪ್ರತಿಭಟನೆಯೇ ದಾರಿಯಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಬುಧವಾರ ಕೋಟದ ಹಿರೇಮಹಾಲಿಂಗೇಶ್ವರ ದೇಗುಲದ ಸನಿಹದಲ್ಲಿ ತೆಕ್ಕಟ್ಟೆ, ಕೋಟದ ಗಿಳಿಯಾರು, ಚಿತ್ರಪಾಡಿ ಕಾರ್ಕಡದವರೆಗೆ ಹೊಳೆ ಹೂಳಿನ ಸಮಸ್ಯೆಯಿಂದ ಕೃತಕ ನೆರೆ ಸೃಷ್ಟಿಯಾಗಿದ್ದು ರೈತರು ಬೆಳೆದ ಕೃಷಿ ಕೊಳೆಯುತ್ತಿರುವ ಹಿನ್ನಲ್ಲೆಯಲ್ಲಿ ಶಾಶ್ವತ ಪರಿಹಾರಕ್ಕಾಗಿ ಹೊಳೆಯ ಹೂಳೆತ್ತಬೇಕು ಎಂದು ಆಗ್ರಹಿಸಿ ಕೋಟದ ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ನಡೆದ ಧರಣಿ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಹಿರಿಯ ಕೃಷಿಕರಾದ ಶಾನಾಡಿ ಶ್ರೀನಿವಾಸ ಭಟ್ ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಕೋಟ ಹಿರೇ ಮಹಾಲಿಂಗೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ದೇಗುಲದಿಂದ ಸತ್ಯಾಗ್ರಹ ಸ್ಥಳಕ್ಕೆ ತೆರಳಿದರು. ಅಪರಾಹ್ನ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಅಹವಾಲುಗಳನ್ನು ಸ್ವೀಕರಿಸಿದರು. ಅಧಿಕಾರಿಗಳ ಪರವಾಗಿ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ, ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಗ್ರಾಮ ಲೆಕ್ಕಿಗ ರಾಘವೇಂದ್ರ ಹಕ್ಲಾಡಿ ಇದ್ದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು

ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ, ಮಲ್ಯಾಡಿ ಶಿವರಾಮ್ ಶೆಟ್ಟಿ, ಉದ್ಯಮಿ ಆನಂದ್ ಸಿ ಕುಂದರ್, ರೈತ ಮುಖಂಡರಾದ ಜಿ.ತಿಮ್ಮ ಪೂಜಾರಿ, ಕೆದೂರು ರೈತ ಮುಖಂಡ ಸದಾನಂದ ಶೆಟ್ಟಿ, ಗೋಪಾಲ್ ಪೈ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟ ಸಹಕಾರಿ ನಿರ್ದೇಶಕರಾದ ರವೀಂದ್ರ ಕಾಮತ್, ರಂಜೀತ್ ಕುಮಾರ್, ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ, ಕೋಟ ರೈತ ಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ್ ಶೆಟ್ಟಿ, ಹೋರಾಟ ಸಮಿತಿಯ ಪ್ರಮುಖರಾದ ನಾಗರಾಜ್ ಗಾಣಿಗ, ತಿಮ್ಮ ಕಾಂಚನ್, ಮಹೇಶ್ ಶೆಟ್ಟಿ, ಗಿರೀಶ್ ದೇವಾಡಿಗ, ಬೋಜ ಪೂಜಾರಿ, ಸುಭಾಷ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ಕೋ.ಗಿ.ನಾ ಸಿದ್ಧ ದೇವಾಡಿಗ, ಮಹಾಬಲ ಪೂಜಾರಿ, ಶ್ರೀನಾಥ ಶೆಟ್ಟಿ ತೆಕ್ಕಟ್ಟೆ, ಗಿರೀಶ್ ಗಾಣಿಗ ಬೆಟ್ಲಕ್ಕಿ, ಕಿರಣ್ ಕುಂದರ್, ರವೀಂದ್ರ ಶೆಟ್ಟಿ ದ್ಯಾವಸ, ರಮೇಶ್ ಮೆಂಡನ್ ಸಾಲಿಗ್ರಾಮ, ಜಗನಾಥ್ ಪೂಜಾರಿ, ಅಚ್ಯುತ್ ಪೂಜಾರಿ, ಬಾಬು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಪ್ರಮುಖ ಟಿ. ಮಂಜುನಾಥ್ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಪ್ರಮುಖರಾದ ಕೀರ್ತೀಶ್ ಪೂಜಾರಿ ಸ್ವಾಗತಿಸಿ, ನಿರೂಪಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!